ವಾಲ್ಪಾಡಿಯಲ್ಲಿ ಕೌಶಲ್ಯ ತರಬೇತಿಯ ಸಮಾರೋಪ
ಮೊದಲಿಗೆ ತರಬೇತಿ ಪಡೆದ ಮಹಿಳೆಯರು ತರಬೇತಿ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡು ತರಬೇತಿಯಿಂದ ಪಡೆದ ಪ್ರಯೋಜನ ಬಗ್ಗೆ ತಿಳಿಸಿದರು.
ತರಬೇತುದಾರೆ ಶುಭಲಕ್ಷ್ಮಿ ಮಾತನಾಡಿ ತರಬೇತಿಯಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೋತಿ ರಾಜ್ ಅವರು ಮಾತನಾಡಿ ಮಹಿಳೆಯರು ಸ್ವ ಉದ್ಯೋಗ ಮಾಡಲು ಹೆಚ್ಚಿನ ಕೌಶಲ್ಯದ ಅಗತ್ಯವಿದ್ದು ವಿಆರ್ ಡಿಎಫ್ ಮಹಿಳೆಯರಿಗೆ ಬೇಕಾದ ತರಬೇತಿ ಹಾಗೂ ಬೆಂಬಲ ನೀಡಲು ಸದಾ ಸಿದ್ದವಿದೆ ಎಂದು ತಿಳಿಸಿದರು.
ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ ಮಾತನಾಡಿ ತರಬೇತಿ ನಂತರ ನಿಮ್ಮದೇ ಒಂದು ಬ್ರಾಂಡ್ ಹೆಸರಲ್ಲಿ ನಿಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಕರೆ ನೀಡಿದರು, ಜೊತೆಗೆ ಯಾವ ಸವಾಲು ಎದುರಾದ್ರೂ ಧೈರ್ಯವಾಗಿ ಮುನ್ನುಗ್ಗುಲು ಸಲಹೆ ನೀಡಿದರು.
ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಮಹಿಳೆಯರಿಗೆ ಅತಿಥಿಗಳು ಪ್ರಮಾಣಪತ್ರ ನೀಡಿದರು.
ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷೆ ಚಂದ್ರಾವತಿ ಇವರು ಉಪಸ್ಥಿತರಿದ್ದರು.
ನಳಿನಿ ಸ್ವಾಗತಿಸಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರತಿಮ ವಂದಿಸಿದರು.