ನೀಕೆ೯ರೆ ಶಾಲೆಯ ವಾಷಿ೯ಕೋತ್ಸವ, ನಿವೃತ್ತ ಶಿಕ್ಷಕಿಗೆ ಬೀಳ್ಕೊಡುಗೆ
ನೀರ್ಕೆರೆ ಜಾರಂದಾಯ ಸೇವಾ ಟ್ರಸ್ಟ್ ಅಧ್ಯಕ್ಷ, ಹಿರಿಯ ಕೃಷಿಕ ಅಜಿತ್ ರಾಜ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಹದಿನಾಲ್ಕು ವರ್ಷಗಳ ಹಿಂದೆ ಕೇವಲ 130 ವಿದ್ಯಾರ್ಥಿಗಳಿದ್ದ ನೀರ್ಕೆರೆ ಸರಕಾರಿ ಶಾಲೆಯಲ್ಲಿ ಈಗ 350ಕ್ಕೂ ಮಿಕ್ಕಿ ಮಕ್ಕಳಿದ್ದಾರೆ, ದುಸ್ಥಿತಿಯಲ್ಲಿದ್ದ ಗ್ರಾಮೀಣ ಶಾಲೆ ಇಂದು ರಾಜ್ಯದಲ್ಲಿ ಗುರುತಿಸಲ್ಪಡುವ ಹಂತಕ್ಕೇರಿದೆ ಎಂದರೆ ಅದಕ್ಕೆ ಮುಖ್ಯಶಿಕ್ಷಕಿಯಾಗಿ ಒದಗಿ ಬಂದ ಮೂಡುಬಿದಿರೆಯ ಯಮುನಾ ಕೆ. ಅವರೇ ಕಾರಣ ಎಂದು ಅಭಿಪ್ರಾಯಪಟ್ಟರು.
ಯಮುನಾ ಅವರಿಗೆ ಜಿಲ್ಲಾ, ರಾಜ್ಯಮಟ್ಟದ ಪ್ರಶಸ್ತಿಗಳು, ಶಿಕ್ಷಕ ರತ್ನ, ಮಹಿಳಾ ಸ್ಪಂದನ ಪ್ರಶಸ್ತಿ ಇವೆಲ್ಲ ಲಭಿಸಿರುವಂತೆಯೇ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ ಕೂಡ ಪ್ರಾಪ್ತಿಯಾಗಲು ಅವರ ಸಾಧನೆಗಳೇ ಕಾರಣ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ನೀರ್ಕೆರೆ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಡಾ। ಪ್ರತಿಮಾ ಮಾತನಾಡಿ, ಯಮುನಾ ಅವರ ಕಾರ್ಯಕ್ಷಮತೆಯಿಂದ ಎಲ್ಲರ ಮನ ಗೆದ್ದಿದ್ದಾರೆ ಎಂದರು. ಸಮ್ಮಾನ ಸ್ವೀಕರಿಸಿದ ಶಿಕ್ಷಕಿ ಯಮುನಾ ಅವರು ಮಾತನಾಡಿ, ದುಸ್ಥಿತಿಯಲ್ಲಿದ್ದ ಶಾಲೆಯನ್ನು ಈ ಹಂತದ ಬೆಳವಣಿಗೆ ಕಾಣುವಂತಾಗಲು ತನ್ನ ಸಂಕಲ್ಪಕ್ಕೆ ಒದಗಿಬಂದ ಎಲ್ಲ ಸಹಕಾರಿಗಳನ್ನು ನೆನೆದು ಕೃತಜ್ಞತೆ ಸಲ್ಲಿಸಿದರು. ಜಿ.ಪಂ. ಮಾಜಿ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ತೆಂಕಮಿಜಾರು ಗ್ರಾ.ಪಂ. ಅಧ್ಯಕ್ಷೆ ಶಾಲಿನಿ ಕೆ. ಸಾಲಿಯಾನ್, ಪಿಡಿಓ ರೋಹಿಣಿ,, ಮಾಜಿ ಅಧ್ಯಕ್ಷ ರಮೇಶ ಶೆಟ್ಟಿ ಮರಿಯಡ್ಕ, ಹೊಸಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಹಾಸ ಸನಿಲ್, ನೀರ್ಕೆರೆ ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ಶಶಿಕಾಂತ ಶೆಟ್ಟಿಗಾರ್, ಗಿರೀಶ ಗೌಡ, ಗೋಪಾಲ ಗೌಡ, ದಿನೇಶ್ ಕೆ., ತಾ। ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ। ದೊರೆಸ್ವಾಮಿ, ಮಾಜಿ ಅಧ್ಯಕ್ಷ ನಾಗೇಶ್., ತಾ। ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ ಸಾಲಿಯಾನ್, ಕಾರ್ಯದರ್ಶಿ ಮೆಲ್ವಿನ್ ಅಲ್ಬುಕರ್ಕ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಡಾ। ರಾಮಕೃಷ್ಣ ಶಿರೂರು, ಸಮ್ಮಾನಿತೆ ಯಮುನಾ ಅವರ ಪಿತ ವಾದಿರಾಜ ಆಚಾರ್ಯ, ಬೈಂದೂರು, ಪತಿ ಯೋಗೀಶ ಆಚಾರ್ಯ ಮೂಡುಬಿದಿರೆ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್, ಪ್ರೌಢಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಮಹೇಶ್ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಜನಾರ್ದನ ಸ್ವಾಗತಿಸಿ, ಶಿಕ್ಷಕ ಮೋಹನ್ ರಾಜ್ ಜಿ. ನಿರೂಪಿಸಿ, ಎಸ್‌ಡಿಎಂಸಿ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿಗಾರ್ ವಂದಿಸಿದರು.
ಸಂಜೆ ಜಾರಂದಾಯ ದೈವಸ್ಥಾನದ ಬಳಿಯಿಂದ ಸಕಲ ಬಿರುದಾವಳಿಗಳೊಂದಿಗೆ ಯಮುನಾ ಕೆ. ಅವರನ್ನು ಮಂಗಳವಾದ್ಯ, ಪುಷ್ಪಾರ್ಚನೆ ಸಹಿತ ಮೆರವಣಿಗೆಯಲ್ಲಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ಬೆಳಗಿನ ಕಾರ್ಯಕ್ರಮವನ್ನು ಗುರು ಭಟ್ ಉದ್ಘಾಟಿಸಿ ಶುಭಹಾರೈಸಿದರು. ಮಕ್ಕಳ ಪ್ರತಿಭಾ ಪುರಸ್ಕಾರ, ತುಳು ನಾಟಕ, ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ಹಿರಿಯ ವಿದ್ಯಾರ್ಥಿಗಳಿಂದ ಮನೋರಂಜನ ಕಾರ್ಯಕ್ರಮ ನಡೆಯಿತು.