ಸ್ಟೆರ್ ಲೈಟ್ ಕಂಪನಿಯಿಂದ ರೈತಗೆ ಪರಿಹಾರ: ಕೃತಜ್ಞತಾ ಸಭೆ
ಈ ಬಗ್ಗೆ ಸೋಮವಾರ ಸಂಜೆ ಬಡಗ ಮಿಜಾರು ಗ್ರಾಮದ ಹಾಲು ಸೊಸೈಟಿಯಲ್ಲಿ ಗ್ರಾಮದ ರೈತರು ಕಿಸಾನ್ ಸಂಘಟನೆಗೆ ಕೃತಜ್ಞತಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ನೊಂದ ರೈತರಾದ ಭಾಸ್ಕರ್ ಶೆಟ್ಟಿ ತಮ್ಮ ಅನಿಸಿಕೆಯನ್ನು ಸಭೆಯ ಮುಂದೆ ಮಂಡಿಸಿದರು. ಗ್ರಾಮದ ಕಿಸಾನ್ ಪ್ರಮುಖರಾದ ಲಾಯ್ಡ್ ಡಿ' ಸೋಜ, ಸಂಜೀವ ಗೌಡ,ಶ್ರೀಧರ ಪೂಜಾರಿ ಮತ್ತು ಭಟ್ರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ರೈತರ ಒಗ್ಗಟ್ಟು ಮತ್ತು ಜಾಗೃತಿಯೇ ನಮ್ಮ ಕಿಸಾನ್ ಶಕ್ತಿ ಎಂದು ತಿಳಿಸಿದರು.
ಕಿಸಾನ್ ಪ್ರಮುಖರಾದ ಶಾಂತಿಪ್ರಸಾದ್ ಹೆಗ್ಡೆ ಮಾತನಾಡಿ ತಾಲೂಕಿನ ರೈತರಿಗೆ ಯಾವುದೇ
ರೀತಿಯ ತೊಂದರೆ, ಅನ್ಯಾಯವಾದರೂ, ರೈತರ ಪರ ಹೋರಾಟ ನಡೆಸಲು ಸದಾ ಸಿದ್ಧ ಎಂದು ಹೇಳಿದರು.
ವಿವಿಧ ಗ್ರಾಮಗಳ ಕಿಸಾನ್ ಪ್ರಮುಖರು ಭಾಗವಹಿಸಿದ್ದರು ಹಾಗೂ ಗ್ರಾಮದ ರೈತರು "ರೈತ ಶಕ್ತಿಯೇ ನಮ್ಮ ಶಕ್ತಿ " ಕಿಸಾನ್ ಸಂಘಟನೆಗಾಗಿ ತಾವು ಸದಾ ದುಡಿಯಲು ಸಿದ್ಧವೆಂದು ಘೋಷಿಸಿರುತ್ತಾರೆ. ಹೋರಾಟ ಯಶಸ್ವಿಯಾಗಲು ಕಾರಣಕರ್ತರಾದ ಎಲ್ಲಾ ಕಾರ್ಯಕರ್ತರಿಗೆ ಶಾಂತಿ ಪ್ರಸಾದ್ ಹೆಗ್ಡೆ ಕೃತಜ್ಞತಾ ಪೂರ್ವಕ ಧನ್ಯವಾದ ಅರ್ಪಿಸಿದರು.
ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಭಂಡಾರಿ ಮತ್ತು ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು. ಸಭೆಯಲ್ಲಿ ಬಡಗ ಮಿಜಾರು ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಭಟ್ ಸ್ವಾಗತಿಸಿದರು. ಕಿಸಾನ್ ಪ್ರಮುಖರಾದ ವಸಂತ್ ಭಟ್ ಅಶ್ವಥಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಡಗ ಮಿಜಾರು ಗ್ರಾಮ ಸಮಿತಿ ಅಧ್ಯಕ್ಷರಾದ ಹೊನ್ನಪ್ಪ ಗೌಡ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
