ರಫ್ತು ಅವಕಾಶಗಳು ಹಾಗೂ ಉತ್ತಮ ಕೃಷಿ ಪದ್ಧತಿ, ಸಂವೇದನಾ ಕಾರ್ಯಕ್ರಮ

ರಫ್ತು ಅವಕಾಶಗಳು ಹಾಗೂ ಉತ್ತಮ ಕೃಷಿ ಪದ್ಧತಿ, ಸಂವೇದನಾ ಕಾರ್ಯಕ್ರಮ


ಮೂಡುಬಿದಿರೆ: ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ, ಕೃಷಿ ವಿಜ್ಞಾನ ಕೇಂದ್ರ ಕಂಕನಾಡಿ, ತೋಟಗಾರಿಕಾ ಇಲಾಖೆ ಮಂಗಳೂರು, ರೈತ ಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿ, ಕೃಷಿ ವಿಚಾರ ವಿನಿಮಯ ಕೇಂದ್ರದ ಜಂಟಿ ಸಹಭಾಗಿತ್ವದಲ್ಲಿ ಸಮಾಜ ಮಂದಿರದಲ್ಲಿ ರಫ್ತು ಅವಕಾಶಗಳು ಹಾಗೂ ಉತ್ತಮ ಕೃಷಿ ಪದ್ಧತಿ, ಸಂವೇದನಾ ಕಾರ್ಯಕ್ರಮ ನಡೆಯಿತು.  


ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ(ಅಪೇಡಾ)ದ ಎ.ಜಿ.ಎಮ್. ಧರ್ಮ ರಾವ್ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 


ಅಪೇಡಾದ ಡಾ. ಪೂಜಾ, ಕೃಷಿ ವಿಜ್ಞಾನ ಕೇಂದ್ರದ ಡಾ. ರಶ್ಮಿ, ಅಪೇಡಾ ದ ಕಾರಂತ್ ಬಿ., ಪ್ರಾತ್ಯಕ್ಷಿಕೆ ಮೂಲಕ ಮಾಹಿತಿಗಳನ್ನು ಒದಗಿಸಿದರು. ರೈತರೊಂದಿಗೆ ಮುಖಾಮುಖಿ ಚರ್ಚೆಯು ನಡೆಯಿತು. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಈ ಚರ್ಚೆಯಲ್ಲಿ ಭಾಗವಹಿಸಿ ಸಾಕಷ್ಟು ಮಾಹಿತಿಯನ್ನು ಒದಗಿಸಿದರು. 

ಸಸ್ಯ ಸಂರಕ್ಷಣೆಯ ಬಗ್ಗೆ ಡಾ. ಕೇದಾರನಾಥ್, ವಿಟ್ಲ ಸಿಪಿಸಿಆರ್ ಐ ನ ಡಾ. ಭವಿಷ್ಯ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.

ಅಪೇಡಾದ ಡಾ ಪೂಜಾ ಮತ್ತು ಡಾ ಕಾರಂತ್ ಇವರಿ ಸಂಪನ್ಮೂಲ ವ್ಯಕ್ತಿ ಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.  

ಕೃಷಿ ವಿಜ್ಞಾನ ಕೇಂದ್ರದ ಡಾ. ರಶ್ಮಿ ಆರ್ ಮತ್ತು ಕೇದಾರನಾಥ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅಡಿಕೆ ಬೆಳೆಯಲ್ಲಿ ಉತ್ತಮ ಕೃಷಿ ಪದ್ಧತಿಗಳ ಕುರಿತು ಸಂಪೂರ್ಣ ತಾಂತ್ರಿಕ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರದ ಅಜಯ್ ಕುಮಾ‌ರ್, ರೈತಜನ್ಯ ಕಂಪೆನಿಯ ಲಿಯೋ ವಾಲ್ಟರ್ ನಜರತ್‌, ಹಾಜರಿದ್ದರು. ಕಂಕನಾಡಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಡಿ ಜೆ ರಮೇಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಕೆ ಪ್ರವೀಣ್‌ ಕಾರ್ಯಕ್ರಮ ನಿರೂಪಿಸಿದರು. ಸಂದೀಪ್ ಪೂಜಾರಿ ಕಾರ್ಯಕ್ರಮ ಅಯೋಜಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article