ಹಿಂದೂ ಸಮಾಜಕ್ಕೆ ಮಾದರಿ ನಾಯಕ ದಿ.ಸುಖಾನಂದ ಶೆಟ್ಟಿ : ದಿನೇಶ್ ಪುತ್ರನ್

ಹಿಂದೂ ಸಮಾಜಕ್ಕೆ ಮಾದರಿ ನಾಯಕ ದಿ.ಸುಖಾನಂದ ಶೆಟ್ಟಿ : ದಿನೇಶ್ ಪುತ್ರನ್


ಮೂಡುಬಿದಿರೆ: ಜಾತಿ ಮತ ಭೇದವಿಲ್ಲದೆ ಹುಟ್ಟು ಹೋರಾಟಗಾರರಾಗಿದ್ದವರು ದಿ. ಸುಖಾನಂದ ಶೆಟ್ಟಿ ಅವರು. ಜಿಲ್ಲೆಯಲ್ಲಿ ಹಿಂದೂ ಸಂಘಟನೆ ಬಲಿಷ್ಠವಾಗಲು ಸುಖಾನಂದ ಶೆಟ್ಟಿ ಕಾರಣ. ಅವರ ನೆನಪು ಶಾಶ್ವತ. ಹಿಂದೂ ಸಮಾಜಕ್ಕಾಗಿ ಅವರು ತಮ್ಮ ಜೀವವನ್ನೇ ಅರ್ಪಿಸಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ಮೂಲ್ಕಿ ಮೂಡುಬಿದಿರೆಯ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಹೇಳಿದರು. 


19 ವರ್ಷಗಳ ಹಿಂದೆ ಮತಾಂತರ ಷಡ್ಯಂತ್ರಕ್ಕೆ ಬಲಿಯಾದ ಮೂಲ್ಕಿಯ ಹಿಂದೂ ಸಂಘಟನೆಯ ನಾಯಕರಾದ ಸುಖಾನಂದ ಶೆಟ್ಟಿ, ದಿನೇಶ್ ಅಮೀನ್ ಹಾಗೂ ಪ್ರೇಮನಾಥ್ ಕೋಟ್ಯಾನ್ ಸಂಸ್ಮರಣ ಕಾರ್ಯಕ್ರಮ ಮುಲ್ಕಿ ನಗರ ಹಾಗೂ ಎಸ್ ಎಸ್ ಫ್ರೆಂಡ್ಸ್ ವತಿಯಿಂದ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಬಿಜೆಪಿ ನಾಯಕರಾದ ಈಶ್ವರ ಕಟೀಲು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ದಿನೇಶ್ ಬಪ್ಪನಾಡು, ಬಿಜೆಪಿ ನಾಯಕರಾದ ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಸತೀಶ್ ಅಂಚನ್, ವಿನೋದ್ ಸಾಲಿಯನ್ ಬೆಳ್ಳಯಾರು, ಶ್ಯಾಮ್ ಪ್ರಸಾದ್, ನವೀನ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article