ನೀರು ಬಂಡಿ ಉತ್ಸವ: ಸಿಬ್ಬಂದಿಯನ್ನು ಎತ್ತಿ ಹಾಕಿದ ಆನೆ ಯಶಸ್ವಿನಿ
Wednesday, December 3, 2025
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ವಾರ್ಷಿಕ ಚಂಪಾ ಷಷ್ಟಿ ಜಾತ್ರೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ನೀರು ಬಂಡಿ ಉತ್ಸವ ನಡೆದಿತ್ತು.
ಬೆಳಗಿಂದಲೇ ಹೊರ ಅಂಗಣದಲ್ಲಿ ನೀರನ್ನು ತುಂಬಿಸಿ ರಾತ್ರಿ ಹೊತ್ತಿಗೆ ಶ್ರೀ ದೇವರಿಗೆ ಮಹಾಪೂಜೆ ಆದ ನಂತರ ಅಂಗಣದಲ್ಲಿ ನೀರು ಬಂಡಿ ಉತ್ಸವ ನಡೆಯುವ ಮೊದಲು ಶ್ರೀ ದೇವಳದ ಆನೆ ಯಶಸ್ವಿನಿ ಮಕ್ಕಳೊಂದಿಗೆ ನೀರಾಟವಾಡುತ್ತಿತ್ತು. ಅಷ್ಟು ಹೊತ್ತಿಗೆ ಅಲ್ಲಿ ಅಡ್ಡ ಬಂದ ಸಿಬ್ಬಂದಿಯನ್ನು ಆನೆ ಎತ್ತಿ ಹಾಕಿದೆ. ತದನಂತರ ಸಿಬ್ಬಂದಿಯು ಸಾವಧಾನವಾಗಿ ತಡವರಿಸಿಕೊಂಡಿರುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರೆಲ್ ಆಗಿದೆ.