ಕಿರುಷಷ್ಠಿ ಮಹೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಅನ್ಯಧರ್ಮಿಯರ ಹೆಸರು: ಆಕ್ಷೇಪ-ಪ್ರತಿಭಟನೆ ಎಚ್ಚರಿಕೆ
Sunday, December 21, 2025
ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಅನ್ಯಧರ್ಮಿಯರ ಹೆಸರಿರುವುದನ್ನು ಆಕ್ಷೇಪಿಸಿ ಕ್ಷೇತ್ರ ಸಂರಕ್ಷಣಾ ವೇದಿಕೆ ವತಿಯಿಂದ ದೇವಸ್ಥಾನದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅನ್ಯಧರ್ಮಿಯರ ಹೆಸರನ್ನು ತೆಗೆಯದಿದ್ದಲ್ಲಿ ಡಿ.22 ರಂದು ಆಡಳಿತ ಕಛೆರಿ ಎದರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಅವರು ಮನವಿ ಸ್ವೀಕರಿಸಿದರು.
ಪ್ರಮುಖರಾದ ಚಿದಾನಂದ ಕಂದಡ್ಕ, ರಾಜೇಶ್ ಎನ್.ಎಸ್., ದಿನೇಶ್ ಸಂಪ್ಯಾಡಿ, ಅಚ್ಚುತ ಕುಕ್ಕಪ್ಪನ ಮನೆ, ಶ್ರೀಕುಮಾರ್ ಬಿಲದ್ವಾರ, ರಾಮಚಂದ್ರ ದೇವರಗದ್ದೆ, ದೀಲಿಪ್ ಉಪ್ಪಳಿಕೆ ಮತ್ತಿತರರು ಉಪಸ್ಥಿತರಿದ್ದರು.