ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶ್ವ ಧ್ಯಾನ ದಿನಾಚರಣೆ ಪ್ರಯುಕ್ತ: ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಹಾಗೂ ಧ್ಯಾನ ಕಾರ್ಯಕ್ರಮ
ಅಮೃತಾಸನದೊಂದಿಗೆ ಧ್ಯಾನವನ್ನು ಶಿವಾನಂದ ರೈ ಇವರು ನಡೆಸಿಕೊಟ್ಟರು. ದ.ಕ. ಕಾಸರಗೋಡು ಜಿಲ್ಲೆಗಳಿಂದ ಆಗಮಿಸಿದ ನಾಲ್ಕು ಸಾವಿರಕ್ಕೂ ಹೆಚ್ಚಿನ ಯೋಗಪಟುಗಳು ಸಾರ್ವಜನಿಕರೊಂದಿಗೆ ಭಕ್ತಿಭಾವದಿಂದ ದೇವಳದ ರಥಬೀದಿಯಲ್ಲಿ ಕಾರ್ಯಕ್ರಮ ಬೆಳಗ್ಗೆ 5 ಗಂಟೆಗೆ ಆಯೋಜನೆ ಗೊಂಡಿದ್ದರೂ ಮುಂಜಾನೆ 3 ಗಂಟೆಗೆ ಅತ್ಯಂತ ಶಿಸ್ತುಬದ್ಧವಾಗಿ ರಥಬಿದಿಯ ಫೂರ್ತಿ ಸಾಲಾಗಿ ಕುಳಿತು ತನ್ಮಯತೆಯಿಂದ ಭಾಗವಹಿಸಿ ಕೊಂಡು ಯೋಗ ಷಣ್ಮುಖ ನಮಸ್ಕಾರ ಮಾಡಿದರು.
ಶನಿವಾರ ರಾತ್ರಿ ಬಂದಿರುವ ಯೋಗಬಂಧುಗಳು ದೇವಾಲಯದ ರಥಬೀದಿ ಸಹಿತ ಪರಿಸರ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು.
ಪ್ರಾಂತ ಸಂಚಾಲಕ, ಸಂಘಟನಾ ವಿಭಾಗದ ಹರೀಶ್ ಕೋಟ್ಯಾನ್, ವಲಯ ಪ್ರಮುಖರಾದ ಅಶೋಕ್ ಜೈನ್, ಜಯರಾಮ ಚೆಂಬುಗುಡ್ಡೆ, ಪ್ರತಾಪ ರಾವ್, ಜಿಲ್ಲಾ ಪ್ರಮುಖರಾದ ಕನಕಾ ಅಮೀನ್, ಗಣೇಶ್ ಸುವರ್ಣ, ಲೋಕೇಶ್, ಈಶ್ವರ್ ಕೊಟ್ಟಾರಿ, ಶಿವಪ್ರಸಾದ್ ಪೊಳಲಿ, ಹರೀಶ್ ಅಂಚನ್, ಜಗದೀಶ್ವರ, ಮನೋಹರ್, ಜೀವನ್ ಶ್ರೀಕಲಾ, ಗೀತಾ ಉಳ್ಳಾಲ, ತಾಲೂಕು ಪ್ರಮುಖರಾದ ಯೋಗೀಶ್ ಆಚಾರ್ಯ, ತಾಲೂಕು ಸಂಚಾಲಕರಾದ ಕೃಷ್ಣಾನಂದ, ಹರಿಪ್ರಸಾದ್, ವಸಂತ, ಮಾಧುರಿ, ಸುನಂದ ನಗರ ಸಂಚಾಲಕ ಶ್ರೀನಿವಾಸ್, ಜನಾರ್ದನ್, ಸುಂದರ, ಶ್ಯಾಮಲ, ಗುರುರಾಜ್, ಸದ್ಯೋಜಾತ್ ಉಪಸ್ಥಿತರಿದ್ದರು. ಕಾರ್ತಿಕ್ ವಂದಿಸಿದರು.



