ಶ್ರೀ ಕೋರ‍್ಡಬ್ಬು ದೈವಸ್ಥಾನ ಸೂಟರ್‌ಪೇಟೆ: ಡಿ.25 ರಂದು ಪ್ರತಿಷ್ಠಾ ವರ್ಧಂತಿ
Monday, December 22, 2025
ಸೂಟರ್‌ಪೇಟೆ: ಅತೀ ಪುರಾತನ ಬಬ್ಬುಸ್ವಾಮಿ ದೈವಸ್ಥಾನಗಳಲ್ಲಿ ಒಂದಾದ ಸೂಟರ್‌ಪೇಟೆ ಶ್ರೀ ಕೋರ‍್ಡಬ್ಬು ದೈವಸ್ಥಾನವು ಸುಮಾರು 150 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ದೈವಸ್ಥಾನವು 2025ರಲ್ಲಿ ಪುನರ್ ನಿರ್ಮಾಣಗೊಂಡಿದ್ದು, ಇದೀಗ 10ನೇ ವರ್ಷದ ಪ್ರತಿಷ್ಠಾ ವರ್ಧಂತಿಯು ಡಿ.25 ರಂದು ಗುರುವಾರ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.
ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ಹೋಮ, ನಂತರ ಶ್ರೀ ಬಬ್ಬುಸ್ವಾಮಿಯ ದರ್ಶನ ಸೇವೆ, ಮಧ್ಯಾಹ್ನ ಸಂಕಳೆ ಗುಳಿಗ ದೈವದ ನೇಮ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ದೈವಸ್ಥಾನದ ಗುರಿಕಾರರಾದ ಎಸ್. ರಾಘವೇಂದ್ರ ಅವರು ತಿಳಿಸಿದ್ದಾರೆ.