ಸಾಲ್ಯಾನ್ ಎಲ್‌ಇಡಿ, ಧ್ವನಿ ನ್ಯೂಸ್ ಮಾಲಕ ಸುದೀಪ್ ಸಾಲ್ಯಾನ್‌ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗರಿಮೆ

ಸಾಲ್ಯಾನ್ ಎಲ್‌ಇಡಿ, ಧ್ವನಿ ನ್ಯೂಸ್ ಮಾಲಕ ಸುದೀಪ್ ಸಾಲ್ಯಾನ್‌ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗರಿಮೆ


ಉಜಿರೆ: ಬೆಳ್ತಂಗಡಿ ತಾಲೂಕು ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಬಹಳಷ್ಟು ಖ್ಯಾತಿ ಪಡೆದಿರುವ ‘ಸಾಲ್ಯಾನ್ ಎಲ್ ಇಡಿ’ ಇಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆಯ ಪ್ರಮಾಣಪತ್ರವನ್ನು ತನ್ನದಾಗಿಸಿಕೊಂಡಿದೆ. 

ಮಂಗಳೂರಿನಲ್ಲಿ ನಡೆದ ದಿ. ಕಿಶೋರ್‌ಕುಮಾರ್ ಹಾಡುಗಳ ಗಾಯನ ದಾಖಲೆ, 100 ಗಾಯಕರು, ನಿರಂತರ 40 ಗಂಟೆಗಳ ಕಾಲ ಕರೋಕೆ ಸ್ವರೂಪದ ಗಾಯನ ಸ್ಪರ್ಧೆಯಲ್ಲಿ ‘ಸಾಲ್ಯಾನ್ ಎಲ್‌ಇಡಿ’ ಮಾಲಕ ಸುದೀಪ್ ಅವರು ತಮ್ಮ ಎಲ್‌ಇಡಿ ಪ್ರದರ್ಶನವನ್ನು ಮಾಡುವ ಮೂಲಕ ನೂತನ ದಾಖಲೆ ನಿರ್ಮಿಸಿ ದ್ದಾರೆ. ಸುದೀಪ್ ಸಾಲ್ಯಾನ್ ಅವರು ಧ್ವನಿ ನ್ಯೂಸ್ ಚಾನೆಲ್‌ನ ಪ್ರಧಾನ ಸಂಪಾದಕರಾಗಿದ್ದಾರೆ.

ಮಂಗಳೂರು ಪುರಭವನದಲ್ಲಿನ 18 ಹಾಗೂ 19ರಂದು ನಡೆದ ಷೋಡಶಿ ಫೌಂಡೇಶನ್ ನೇತೃತ್ವದಲ್ಲಿ ‘ಗಾತಾ ರಹೇ ಮೇರಾ ದಿಲ್’ ಎಂಬ ಹೆಸರಿನಲ್ಲಿ ದಿ. ಕಿಶೋರ್ ಕುಮಾರ್ ಅವರು ಹಾಡಿದ ಹಾಡುಗಳನ್ನು ಬರೋಬ್ಬರಿ 100 ಗಾಯಕರು ನಿರಂತರ 40 ಗಂಟೆ ‘ಕರೋಕೆ’ ಸ್ವರೂಪದಲ್ಲಿ ಹಾಡುವ ಮೂಲಕ ವಿಶ್ವದಾಖಲೆಯ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ನಲ್ಲಿ ಹೆಸರು ದಾಖಲಿಸಿದ್ದಾರೆ.

ವಿಶ್ವದಾಖಲೆಯಲ್ಲಿ ಸಾಲ್ಯಾನ್ ಎಲ್‌ಇಡಿ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. ಇದೀಗ ಈ ಸಾಧನೆಗೆ ಸುದೀಪ್ ಸಾಲ್ಯಾನ್ ಅವರಿಗೆ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ವತಿಯಿಂದ ಪದಕ, ಸರ್ಟಿಫಿಕೇಟ್ ನೀಡಿ ಗೌರವಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article