ಕಾಸರಗೋಡಿನಲ್ಲಿ ಕನ್ನಡ ಭಾಷಾ ಪಠ್ಯಕ್ಕೆ ಕತ್ತರಿ: ಜಿಲ್ಲಾ ಕಸಾಪ ಖಂಡನೆ

ಕಾಸರಗೋಡಿನಲ್ಲಿ ಕನ್ನಡ ಭಾಷಾ ಪಠ್ಯಕ್ಕೆ ಕತ್ತರಿ: ಜಿಲ್ಲಾ ಕಸಾಪ ಖಂಡನೆ

ಬಂಟ್ವಾಳ: ಗಡಿನಾಡ ಕಾಸರಗೋಡು ಜಿಲ್ಲೆಯ ಕನ್ನಡ ಶಾಲೆಗಳಲ್ಲಿ ಮಲಯಾಳ ಕಡ್ಡಾಯ ಮಸೂದೆಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸಿದೆ.

ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲಯಾಳ ಭಾಷಾ ಮಸೂದೆಯಿಂದಾಗಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಮಸೂದೆಯಿಂದ ಕನ್ನಡಕ್ಕೆ ಕುತ್ತು ಬರಲಿದೆ ಎಂಬ ಆತಂಕ ಮೂಡಿದೆ. ಇದನ್ನು ನಿವಾರಿಸುವ ಕಾರ್ಯವಾಗಬೇಕು. ಕಾಸರಗೋಡಿನಲ್ಲಿ ಸುಮಾರು ಏಳೂವರೆ ಲಕ್ಷ ಕನ್ನಡಿಗರಿದ್ದು, 210 ಕನ್ನಡ ಮಾಧ್ಯಮ ಶಾಲೆಗಳಿವೆ ಕನ್ನಡ ಕಲಿಯುವ ಹಕ್ಕನ್ನು ಮೊಟಕುಗೊಳಿಸುವ ಕಾರ್ಯ ಕೇರಳ ಸರಕಾರದಿಂದಾಗುತ್ತಿರುವುದು ಖೇದನೀಯ ಎಂದು ಬಂಟ್ವಾಳದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್  ಹೇಳಿದ್ದಾರೆ. 

ಸಭೆ ಸರ್ವಾನುಮತಿಯಿಂದ ಕೇರಳದ ಕನ್ನಡ ಶಾಲೆಗಳಲ್ಲಿ ಮಲಯಾಳ ಹೇರಿಕೆಯನ್ನು ಖಂಡಿಸಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article