ನರೇಗಾ ಹೆಸರು ಬದಲಾವಣೆಯ ವಿರುದ್ಧ ಬಂಟ್ವಾಳದಲ್ಲಿ ಕಾಂಗ್ರೆಸ್‌ನಿಂದ ಪಾದಯಾತ್ರೆ

ನರೇಗಾ ಹೆಸರು ಬದಲಾವಣೆಯ ವಿರುದ್ಧ ಬಂಟ್ವಾಳದಲ್ಲಿ ಕಾಂಗ್ರೆಸ್‌ನಿಂದ ಪಾದಯಾತ್ರೆ


ಬಂಟ್ವಾಳ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯ ಮಹಾತ್ಮಾ ಗಾಂಧಿ ಹೆಸರು ಬದಲಾಯಿಸಲು ಹೊರಟ ಕೇಂದ್ರ ಸರಕಾರ ವಿರುದ್ಧ ಬಂಟ್ವಾಳದಲ್ಲಿಯು ಬುಧವಾರ ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ನರೇಗಾ ಬಚಾವೊ ಅಭಿಯಾನ ನಡೆಸಲಾಯಿತು.


ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ ಸಮೀಪದ ಮಣಿಹಳ್ಳ ಜಂಕ್ಷನ್‌ನಲ್ಲಿ ಚಾಲನೆ ನೀಡಲಾಯಿತು. ಬಿ.ಸಿ.ರೋಡ್‌ನ ಕೈಕಂಬವರೆಗೆ ಪಾದಯಾತ್ರೆ ನಡೆಸಿ ವಾಪಾಸ್ ಅಲ್ಲಿಂದ ಅಗಮಿಸಿ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಸಂಪನ್ನಗೊಂಡಿತು.


ಬಳಿಕ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಅವರು, ಯು.ಪಿ.ಎ. ಸರಕಾರದ ಕಾಲದಲ್ಲಿ ಜಾರಿಗರ ಬಂದಿರುವ ನರೇಗಾ ಯೋಜನೆಯಿಂದ ಹೆಚ್ಚಿನ ಗ್ರಾ.ಪಂ.ಗಳು ಅಭಿವೃದ್ಧಿ ಕಂಡಿದೆ. ಪ್ರಸ್ತುತ ಕೇಂದ್ರ ಸರಕಾರದ ನೀತಿಯಿಂದ ಯೋಜನೆಯು ಶಕ್ತಿ ಕಳೆದುಕೊಳ್ಳುವ ಸ್ಥಿತಿ ಉಂಟಾಗಿದ್ದಲ್ಲದೆ ಮಹಾತ್ಮಾ ಗಾಂಧಿ ಹೆಸರನ್ನು ಅಳಿಸುವುದರ ಜೊತೆಗೆ ಯೋಜನೆಯ ಮೂಲ ಸ್ವರೂಪವನ್ನೇ ಬದಲಾಯಿಸುವ ಕಾರ್ಯವನ್ನು ಮಾಡಲಾಗಿದೆ ಎಂದರು.

ಯೋಜನೆಯಲ್ಲಾಗುವ ಮಾರ್ಪಾಡುಗಳಿಂದ ಬಡವರಿಗೆ ಸಾಕಷ್ಟು ಅನ್ಯಾಯ ಆಗುತ್ತಿದೆ. ಶೇ.60: 40 ಅನುಪಾತ ಮಾಡಿದ್ದು, ಬಹಳಷ್ಟು ತೊಂದರೆ ಉಂಟಾಗುತ್ತಿದೆ. ಈಗಾಗಲೇ ಕೇಂದ್ರ ಕಾಂಗ್ರೆಸ್ ಇರುವ ರಾಜ್ಯ ಸರಕಾರಗಳಿಗೆ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದು, ಯೋಜನೆ ಅನುಷ್ಠಾನವಾದರೆ, ರಾಜ್ಯದ ಶೇ.40 ಪಾಲು ನೀಡಲು ತೊಂದರೆ ಆಗುವುದು ಖಚಿತ. ಇದರಿಂದ ಯೋಜನೆ ಸಂಪೂರ್ಣ ಸ್ಥಗಿತವಾಗುವ ಭೀತಿ ಇದೆ. ಅಲ್ಲದೆ, ಇನ್ನು ಬದಲಾದ ಯೋಜನೆಯಂತೆ ಯಾವುದೇ ನಿರ್ಧಾರವನ್ನು ಪಂಚಾಯಿತಿ ತೀರ್ಮಾನ ಮಾಡಲೂ ಸಾಧ್ಯವಿಲ್ಲ. ಇದರಿಂದ ಪಂಚಾಯಿತಿ ಹಾಗೂ ರಾಜ್ಯ ಸರಕಾರದ ಸ್ವಾಯತ್ತೆಗೆ ಧಕ್ಕೆ ಉಂಟಾಗುತ್ತಿದೆ. ಜಾಬ್ ಕಾರ್ಡ್ ಮಾಡಿ ಉದ್ಯೋಗ ಮಾಡುವವರಿಗೆ ಅನುದಾನ ಕೊರತೆಯಿಂದ ತೊಂದರೆ ಆಗುತ್ತದೆ. ಅಭಿವೃದ್ಧಿಗೆ ಕೊಡಲಿಯೇಟು ಬೀಳಲಿದೆ ಎಂದ ಅವರು ಪ್ರತಿಭಟನೆಯಲ್ಲಿ ನೈಜ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡು ಯಶಸ್ಸಿಗೊಳಿಸಿದ್ದಾರೆ ಎಂದು ಹೇಳಿದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಪಕ್ಷದ ಮುಖಂಡರಾದ ಪಿಯೂಸ್ ಎಲ್. ರೋಡ್ರಿಗಸ್, ಎಂ.ಎಸ್. ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಅಶ್ವನಿ ಕುಮಾರ್ ರೈ, ಪದ್ಮಶೇಖರ ಜೈನ್, ಸಂಜೀವ ಪೂಜಾರಿ ಬೊಳ್ಳಾಯಿ, ಪದ್ಮನಾಭರೈ, ಮಹಮ್ಮದ್ ನ.ನಂದಾವರ, ಇಬ್ರಾಹಿಂ ನವಾಜ್, ಮಮತಾಗಟ್ಟಿ, ಜಯಂತಿ ಪೂಜಾರಿ, ಇಬ್ರಾಹಿಂ ಕೈಲಾರ್, ಸದಾಶಿವ ಬಂಗೇರ, ಸುದರ್ಶನ್ ಜೈನ್, ಅಬ್ಬಾಸ್ ಆಲಿ, ವೆಂಕಪ್ಪ ಪೂಜಾರಿ ಬಂಟ್ಚಾಳ, ಶಬೀರ್ ಸಿದ್ದಕಟ್ಟೆ, ಸುದೀಪ್ ಕುಮಾರ್ ರೈ ಮಾಣಿ, ಐಡಾ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಸ್ವಾಗತಿಸಿ, ವಂದಿಸಿದರು. ಬೂಡಾ ಅಧ್ಯಕ್ಷ ಬೇಬಿಕುಂದರ್ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article