ಗ್ರಾ.ಪಂ. ಸದಸ್ಯತ್ವ ಅನೂರ್ಜಿತ

ಗ್ರಾ.ಪಂ. ಸದಸ್ಯತ್ವ ಅನೂರ್ಜಿತ

ಬೆಳ್ತಂಗಡಿ: ನಿಯಮ ಬಾಹಿರವಾಗಿ ಸಹೋದರನಿಗೆ ಗ್ರಾಮ ಪಂಚಾಯತ್ ನ ಕಾಮಗಾರಿ ಗುತ್ತಿಗೆ ನಿರ್ವಹಿಸಲು ಅವಕಾಶ ಕಲ್ಪಿಸಿದ ಆರೋಪ ಸಾಬೀತಾದ ಮೇರೆಗೆ ಇಲಾಖೆ ತೀವ್ರ ಕ್ರಮ ಕೈಗೊಂಡಿದೆ. ಅಂಡಿಂಜೆ ಗ್ರಾಮ ಪಂಚಾಯತ್‌ನ ಸದಸ್ಯ ಜಗದೀಶ ಹೆಗ್ಡೆಯವರ ಸದಸ್ಯತ್ವ ಅನೂರ್ಜಿತಗೊಳಿಸಿ ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೀಠಾಧಿಕಾರಿಗಳು ಅದೇಶ ನೀಡಿದ್ದಾರೆ ಎನ್ನಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993 ರ ಪ್ರಕಾರ, ಪ್ರಕರಣ 43(J)(1)(v)ನಂತೆ, ಅಂಡಿಂಜೆ ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ಹೆಗ್ಡೆಯವರ ಸದಸ್ಯತ್ವವನ್ನು ರದ್ದುಗೊಳಿಸಿ, ಮುಂದಿನ 6 ವರ್ಷಗಳ ಕಾಲ ಯಾವುದೇ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಳಿಸಲಾಗಿದೆ. ಈ ಆದೇಶವನ್ನು ಗ್ರಾಮ ಪಂಚಾಯತ್ ಪೀಠಾಧಿಕಾರಿ ಶಿವಕುಮಾರ ಅವರು 05.01.2026 ರಂದು ಬಿಡುಗಡೆ ಮಾಡಿದ್ದಾರೆ.

ಸ್ಥಳೀಯ ನಿವಾಸಿ ಹರೀಶ್ ಕುಮಾರ್ ಈ ಸಂಬಂಧ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದ್ದು, ತನಿಖೆಯಲ್ಲಿ ಜಗದೀಶ್ ಹೆಗ್ಡೆಯವರು ತಮ್ಮ ಕರ್ತವ್ಯವನ್ನು ಲಂಘಿಸಿ, ಎಲ್ಲಾ ಕಾಮಗಾರಿಗಳ ಬಿಲ್ ಪಾವತಿಗೆ ಸಹಕರಿಸಿ, ನಿಯಮ ಬಾಹಿರವಾಗಿ ಗುತ್ತಿಗೆ ನೀಡಿರುವುದು ದೃಢಪಟ್ಟಿದೆ. ಈ ನಿರ್ಧಾರ ಗ್ರಾಮ ಪಂಚಾಯತ್ ಆಡಳಿತದಲ್ಲಿ ಜವಾಬ್ದಾರಿ ಮತ್ತು ಆಡಳಿತ ಪರಿಶುದ್ಧತೆಯನ್ನು ದೃಢಪಡಿಸುವಂತೆ ಪರಿಗಣಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article