ಜಾತಿ ನಿಂದಿಸಿ ಹಲ್ಲೆ: ಪ್ರಕರಣ ದಾಖಲು
Tuesday, January 20, 2026
ಕಡಬ: ಕಡಬ ಗ್ರಾಮದ ಕಳಾರದಲ್ಲಿರುವ ಸುರಭಿ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಜಾತಿ ನಿಂದನೆ ನಡೆಸಿ ಹಲ್ಲೆ ಮಾಡಿದ ಆರೋಪದಡಿ ಮೂವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಲ್ತಾಡು ಗ್ರಾಮ, ಕಡಬ ತಾಲೂಕು ನಿವಾಸಿ ಜಗದೀಶ್ (28) ಅವರು ನೀಡಿದ ದೂರಿನಂತೆ, ಜನವರಿ 16ರಂದು ರಾತ್ರಿ ಸುಮಾರು 10.00-10.30 ಗಂಟೆಯ ನಡುವೆ ಅವರು ಬಾರ್‌ನಲ್ಲಿ ಊಟ ಮುಗಿಸಿ ಕ್ಯಾಶ್ ಕೌಂಟರ್ ಸಮೀಪ ನಿಂತಾಗ, ಪರಿಚಯಸ್ಥರಾದ ಅಜಯ್, ಬೇಬಿ ಮತ್ತು ಅನಿಲ್ ಅವರು ವಿನಾಕಾರಣ ಜಗಳ ಆರಂಭಿಸಿದ್ದಾರೆ. ಈ ವೇಳೆ ಜಾತಿ ನಿಂದನೆ ಮಾಡಿ, ಕೈಯಿಂದ ಕೆನ್ನೆ, ತಲೆ, ಭುಜ ಮತ್ತು ಬೆನ್ನಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ: 08/2026. ಕಲಂ: 115(2), 352, 351(3) BNS-2023 & : 3(1), (r), & (S) the Sc & St (Prevention of atrocities) Amendment act-2015. ನಂತೆ ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.