ಕೋಡಿ ಬೀಚ್ ನಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಆಕರ್ಷಣೀಯ ‘ನಮ್ಮೂರ ಶಾಲೆ’ ಪರಿಕಲ್ಪನೆಯ ಬೃಹತ್ ಮರಳು ಶಿಲ್ಪಾಕೃತಿ

ಕೋಡಿ ಬೀಚ್ ನಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಆಕರ್ಷಣೀಯ ‘ನಮ್ಮೂರ ಶಾಲೆ’ ಪರಿಕಲ್ಪನೆಯ ಬೃಹತ್ ಮರಳು ಶಿಲ್ಪಾಕೃತಿ


ಕುಂದಾಪುರ: ಕುಂದಾಪುರ ಪಾರಿಜಾತದ ವತಿಯಿಂದ ದಿ. ರಾಮಚಂದ್ರ ಭಟ್ ಮತ್ತು ದಿ. ಅಹಲ್ಯ ಭಟ್ ಸವಿನೆನಪಿಗಾಗಿ ಕೋಡಿ ಬೀಚ್ ನಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಆಕರ್ಷಣೀಯ ‘ನಮ್ಮೂರ ಶಾಲೆ’ ಪರಿಕಲ್ಪನೆಯ ಬೃಹತ್ ಮರಳು ಶಿಲ್ಪಾಕೃತಿ ಕಣ್ಮನ ಸೆಳೆಯುತ್ತಿದೆ.

ಸರಕಾರಿ ಶಾಲಾ ಮಕ್ಕಳ ಧ್ಯೇಯವನ್ನಿಟ್ಟುಕ್ಕೊಂಡು ಸ್ವಾತಂತ್ರತೆಯನ್ನು ಮತ್ತು ಬಣ್ಣದ ಕನಸ್ಸನ್ನು ಕಾಣುವ ಗಾಳಿಪಟದ ವರ್ಣನೆಯೊಂದಿಗೆ ಶಾಲಾ ದೃಶ್ಯ ಹಾಗೂ ಗಾಳಿಪಟ ಉತ್ಸವ ಎಂಬ ಬರಹದೊಂದಿಗೆ ಬಳಪವನ್ನು ಹಿಡಿದುಕೊಂಡ ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಭಾವನೆಯನ್ನು ಅಭಿವ್ಯಕ್ತಿಸುವ ಕಲಾಕೃತಿಯು “ಸ್ಯಾಂಡ್ ಥೀಂ” ಉಡುಪಿಯ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ರಿಂದ 15 ಅಡಿ ಅಗಲ ಮತ್ತು 6 ಅಡಿ ಎತ್ತರದಲ್ಲಿ ರಚಿಸಲಾಗಿದ್ದು; ದಿನಾಂಕ: 18ರಂದು ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article