ಕುಂದಾಪುರದ ಶ್ರೀ ನಾಗ ಬೊಬ್ಬರ್ಯ, ಹ್ಯಾಗುಳಿ ಹಾಗೂ ಪರಿವಾರ ದೇವಸ್ಥಾನದ ನೂತನ ಅಧ್ಯಕ್ಷರಾಗಿ ರಮೇಶ್ ಪೂಜಾರಿ ಮೇಲ್ ಹಿತ್ಲು ಆಯ್ಕೆ
Thursday, January 29, 2026
ಕುಂದಾಪುರ: ಶ್ರೀ ನಾಗ ಬೊಬ್ಬರ್ಯ, ಹ್ಯಾಗುಳಿ ಹಾಗೂ ಪರಿವಾರ ದೇವಸ್ಥಾನ, ರೋಯಲ್ ಸಭಾ ಭವನದ ಹತ್ತಿರ, ಚಿಕ್ಕನ್ ಸಾಲು ರಸ್ತೆ ಕುಂದಾಪುರ ಇಲ್ಲಿ ಜ.25 ರಂದು ನಡೆದ ವಾರ್ಷಿಕ ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಡೆಯಿತು.
2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ರಮೇಶ್ ಪೂಜಾರಿ ಮೇಲ್ ಹಿತ್ಲು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಪೂಜಾರಿ ಕೆಳಮನೆ, ಕೋಶಾಧಿಕಾರಿಯಾಗಿ ನಾಗರಾಜ್ ಅಚಾರ್ಯ, ಗೌರವಾಧ್ಯಕ್ಷರಾಗಿ ರಾಧಾಕೃಷ್ಣ.ಯು, ಉಪಾಧ್ಯಕ್ಷರಾಗಿ ವಿಜಯ್ ಕುಮಾರ್, ಪ್ರಶಾಂತ್ ವಿ.ಮೊಗವೀರ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಮೋದ್.ಕೆ, ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್ ಆಚಾರ್ಯ ಅವರು ಆಯ್ಕೆಯಾದರು.