ಫೆ.1 ರಂದು ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ
Wednesday, January 28, 2026
ಮಂಗಳೂರು: ಕಲ್ಕೂರ ಪ್ರತಿಷ್ಠಾನ ಹಾಗೂ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ಮಂಗಳೂರು ವತಿಯಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸಹಯೋಗದೊಂದಿಗೆ, ರಥಸಪ್ತಮಿಯ ಪ್ರಯುಕ್ತ ಫೆ.1 ರಂದು ಬೆಳಗ್ಗೆ 5.30 ರಿಂದ 8.30 ರವರೆಗೆ ‘ಸಾಮೂಹಿಕ 108 ಸೂರ್ಯ ನಮಸ್ಕಾರ’ ಕಾರ್ಯಕ್ರಮ ನಡೆಯಲಿದೆ.
ಪ್ರಪಂಚಕ್ಕೆ ಬೆಳಕನ್ನು ನೀಡಿ ಅಂಧಕಾರವನ್ನು ಹೋಗಲಾಡಿಸುವ, ಸರ್ವಶಕ್ತ ಸೂರ್ಯನ ಪೂಜೆಯಿಂದ ಜಗತ್ತಿಗೂ ಹಾಗೂ ನಮಗೂ ನೆಮ್ಮದಿ ಲಭಿಸುವ ಅವಕಾಶ ಸೂರ್ಯ ನಮಸ್ಕಾರದಲ್ಲಿದ್ದು, ಸಾರ್ವಜನಿಕರು ಈ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.
ಭಾಗವಹಿಸುವವರು ತಮ್ಮ ಶರೀರಕ್ಕೆ ಹೊಂದುವಷ್ಟು ಗಾತ್ರದ ದಪ್ಪನೆಯ ನೆಲಹಾಸು ತರುವಂತೆ ತಿಳಿಸಿದ್ದಾರೆ.