ಫೆ.9 ರಿಂದ 12 ರವರೆಗೆ ಜಿ ರಾಮ್ ಜಿ ಯೋಜನೆಯ ವಿರುದ್ಧ 100 ಕಿ.ಮೀ. ಪಾದಯಾತ್ರೆ: ಐವನ್ ಡಿಸೋಜ

ಫೆ.9 ರಿಂದ 12 ರವರೆಗೆ ಜಿ ರಾಮ್ ಜಿ ಯೋಜನೆಯ ವಿರುದ್ಧ 100 ಕಿ.ಮೀ. ಪಾದಯಾತ್ರೆ: ಐವನ್ ಡಿಸೋಜ

ಮಂಗಳೂರು: ಮನರೇಗಾ ಯೋಜನೆಯ ಹೆಸರನ್ನು ಕೈಬಿಟ್ಟು ಜಿ ರಾಮ್ ಜಿ ಹೆಸರಿನ ಮೂಲಕ ಜನರ ಜೀವನವನ್ನು ಅತಂತ್ರಕ್ಕೆ ತಳ್ಳಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಫೆ.9 ರಿಂದ 12 ರವರೆಗೆ ಸುಳ್ಯದಿಂದ ಮುಲ್ಕಿ ಸೇತುವೆಯ ತನಕ 100 ಕಿ.ಮೀ. ಪಾದಯಾತ್ರೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ಅವರು ಇಂದು ನಗರದ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಫೆ.9 ರಂದು ಸುಳ್ಯದಲ್ಲಿ ಪ್ರಾರಂಭವಾಗುವ ಪಾದಯಾತ್ರೆಯಲ್ಲಿ ಪ್ರತಿನಿತ್ಯ ಕಡಿಮೆ ಎಂದರೂ ೪ ಸಭೆಗಳನ್ನು ನಡೆಸಲಾಗುವುದು, ಫೆ.12 ರಂದು ಮುಲ್ಕಿ ಸೇತುವೆಯ ಬಳಿ ಸಮಾಪನಗೊಳ್ಳಲಿದೆ. ಈ ನಾಲ್ಕು ದಿನದ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ನಾಯಕರುಗಳು ಭಾಗವಹಿಸಲಿದ್ದು, ಒಂದು ದಿನ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜ.21 ರಂದು ನಗರದ ಪುರಭವನದ ಎದುರು ಇರುವ ಗಾಂಧಿ ಪಾರ್ಕ್‌ನಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದ್ದು, ಜ.22 ರಿಂದ ಜ.31 ರವರೆಗೆ ರಾಜ್ಯ ಸರ್ಕಾರ ನರೇಗಾ ವಿಚಾರದಲ್ಲಿ ವಿಶೇಷ ಅಧಿವೇಶನ ನಡೆಸಲಿದ್ದು, ರಾಷ್ಟ್ರಪತಿಗಳ ಭಾಷಣದ ಬಳಿಕ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಚರ್ಚೆ ನಡೆಸಲಾಗುವುದು ಎಂದರು.

ಕಳೆದ 20 ವರ್ಷಗಳಿಂದ ಮನರೇಗಾ ಯೋಜನೆಯು ಚಾಲ್ತಿಯಲ್ಲಿದ್ದು, ಏಕಾಏಕಿ ಒಂದುವರೆ ದಿನ ಚರ್ಚೆ ನಡೆಸಿ ನೂತನ ಯೋಜನೆಯನ್ನು ಚಾರಿಗೆ ತಂದು ಜನರಿಗೆ ಹೇಳಲೂ ಕಷ್ಟವಾಗುವಂತಹ ಹೆಸರನ್ನು ಇಟ್ಟಿದ್ದಾರೆ. ಇಲ್ಲಿಯ ತನಕ ಕೇಂದ್ರ ಸರ್ಕಾರ ವತಿಯಿಂದ 100 ದಿನಗಳ ಕೆಲಸದ ಜೊತೆಗೆ ವೇತನವನ್ನು ನೀಡುತ್ತಿದ್ದು, ಈಗ ಏಕಾಏಕಿ ಶೇ.60 ಕೇಂದ್ರ ಸರ್ಕಾರ ಹಾಗೂ ಶೆ.40 ರಾಜ್ಯ ಸರ್ಕಾರ ನೀಡಬೇಕು ಅದರಲ್ಲೂ ವೇತನವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಹೇಳಿದೆ. ಈಗಾಗಲೇ ಇದರ ವಿರುದ್ಧ 6 ರಾಜ್ಯಗಳು ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದರೂ ಅವೈಜ್ಞಾನಿಕವಾಗಿ ಹೇರಿಕೆ ಮಾಡಲು ಹೊರಟಿದ್ದಾರೆ ಎಂದರು.

ನರೇಗಾ ಯೋಜನೆಯ ಮೂಲಕ ೧೫ ಕೋಟಿ ಜನರು ಉದ್ಯೋಗವನ್ನು ಮಾಉತ್ತಿದ್ದು, ಈ ಮೂಲಕ ಅವರ ಅಭಿವೃದ್ಧಿಯೊಂದಿಗೆ ಗಾಮದ ಅಭಿವೃದ್ಧಿಯೂ ಆಗುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರ ಸೂಚಿಸಿದ ಕೆಲಸ ಹಾಗೂ ಸ್ಥಳದಲ್ಲಿ ಮಾತ್ರ ಕೆಲಸ ಮಾಡಬೇಕು ಎಂದಿದೆ. ಇದರಿಂದಾಗಿ ಜನಪರವಾಗಿದ್ದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಯೋಜನೆಯನ್ನು ಕೊನೆಗಳಿಸುವ ಹುನ್ನಾರವಾಗಿದೆ ಎಂದು ಹೇಳಿದರು.

ಈಗಾಗಲೇ ಒಂದು ಬಾರಿ ಗಾಂಧೀಜಿಯನ್ನು ಕೊಂದಿದ್ದು, ಈಗ ಮತ್ತೊಂದು ಬಾರಿ ಗಾಂಧಿಯನ್ನು ಕೊಂದಿದ್ದಾರೆ. ನಮಗೆ ಗೋಡ್ಸೆಯ ಹೆಸರನ್ನು ಇಟ್ಟರೂ ತೊಂದರೆಯಿಲ್ಲ. ಆದರೆ ಈ ಹಿಂದ ಇದ್ದ ಯೋಜನೆ ಹಾಗೆಯೇ ನಡೆದಬೇಕು ಇದರ ವಿರುದ್ಧ ಪ್ರತೀ ತಾಲೂಕು, ಬೂತ್ ಮಟ್ಟದಲ್ಲೂ ಪ್ರತಿಭಟನೆ, ಪಾದಯಾತ್ರೆ ನಡೆಸಲಾಗುವುದು ಎಂದು ಹೇಳಿದರು.

ವರ್ಷದಲ್ಲಿ 36 ಕೋಟಿ ಮಾನವ ದಿನಗಳು ಕೆಲಸ ಮಡೆದಿದ್ದು, 26 ಲಕ್ಷ ಜನ ಪ.ಜಾ., 10 ಲಕ್ಷ ಜನ ಪ.ಪಂ.ದವರು ಕೆಲಸ ಮಾತುತ್ತಿದ್ದಾರೆ ಎಂದ ಅವರು ಆರ್ಟಿಕಲ್ 258 ಹಾಗೂ 280ನ್ನು ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ‘ನರೇಗಾ ಬಚಾವೋ’ ಸಂಗ್ರಮ್ ಆಂದೋಲನ ನಡೆಸಲಾಗುವುದು ಎಂದು ಹೇಳಿದರು.

ಪ್ರಮುಖರಾದ ಮಮತಾ ಗಟ್ಟಿ, ಶಶಿಧರ್ ಹೆಗ್ಡೆ, ಅಪ್ಪಿ, ಅಶ್ರಫ್, ನಾಗೇಂದ್ರ, ಇಮ್ರಾನ್, ಸೋನ್ಸ್, ಸತೀಶ್ ಬೆಂಗ್ರೆ, ವಿದ್ಯಾ, ನೀತು ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article