ಕೆ.ಎಸ್.ಆರ್.ಟಿ.ಸಿ. ಬಸ್ ಪ್ರಯಾಣದರ ಕಡಿತ
Saturday, January 3, 2026
ಮಂಗಳೂರು: ಮಂಗಳೂರು ವಿಭಾಗದಿಂದ ಕೆ.ಎಸ್.ಆರ್.ಟಿ.ಸಿ ನಿಗಮದ ಕುಂದಾಪುರ/ ಉಡುಪಿ/ ಮಂಗಳೂರಿನಿಂದ ಬೆಂಗಳೂರಿಗೆ ಕಾರ್ಯಾಚರಣೆಯಾಗುವ ವಿವಿಧ ಮಾದರಿಯ ಪ್ರತಿಷ್ಠಿತ ಬಸ್ಸುಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಶೇ.10% ರಿಂದ ಶೇ.15% ರವರೆಗೆ ಪ್ರಯಾಣದರಗಳನ್ನು ಕಡಿಮೆಗೊಳಿಸಲಾಗಿದ್ದು, ಜನವರಿ 5 ರಿಂದ ಜಾರಿಗೆ ಬರುವಂತೆ ನಿಗಮದ ಸಾರಿಗೆಗಳಲ್ಲಿ ವಿಧಿಸಲಾಗುತ್ತಿದೆ.