ಅಪಘಾತ ಸಾವು: ಕಾರು ಚಾಲಕನಿಗೆ ಜೈಲುವಾಸ, ದಂಡ
ಮಂಗಳೂರು: ರಸ್ತೆ ಅಪಘಾತ ಪಡಿಸಿ ಬೈಕ್‌ನ ಸಹ ಸವಾರೆ ರಿಯಾ ಅಂಟನಿ (19) ಎಂಬಾಕೆಯ ಸಾವಿಗೆ ಕಾರಣರಾದ ಕಾರಿನ ಚಾಲಕ ದೀಪಕ್ ಆರ್. ಕಾರಿಯ ಎಂಬಾತನಿಗೆ ಮಂಗಳೂರು ಜಿಲ್ಲಾ ನ್ಯಾಯಾಲಯ ಆರು ತಿಂಗಳು ಸದಾ ಜೈಲುವಾಸ ಹಾಗೂ 7 ಸಾವಿರ ರೂ. ದಂಡ ವಿಧಿಸಿದೆ.
ಮಂಗಳೂರಿನ ಲಾಲ್‌ಬಾಗ್ ಆದಿತ್ಯ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಸರಹದ್ದಿನಲ್ಲಿ 3-09-2022ರಂದು ಕಾರನ್ನು ಮಣ್ಣಗುಡ್ಡ ಕಡೆಯಿಂದ
ಗಾಂಧಿನಗರ ಕಡೆಗೆ ತೀರಾ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿದ್ದರು. ಬಳಿಕ ದ್ವಿಚಕ್ರ ವಾಹನವನ್ನು ಸವಾರ ಆಕಾಶ್ ಅಜಯ್ ಮತ್ತು ಮೃತ ರಿಯಾ ಅಂಟನಿಯವರು ಸಹ ಸವಾರನಾಗಿ ಹೋಗುತ್ತಿರುವಾಗ ಹೆರಿಟೇಜ್ ಅಪಾರ್ಟ್ ಮೆಂಟ್ ಬಳಿ ತಲುಪುವಾಗ ದ್ವಿಚಕ್ರ ವಾಹನಕ್ಕೆ ಅಪಘಾತ ಪಡಿಸಿದ ಪರಿಣಾಮ ದ್ವಿಚಕ್ರವಾಹನ ಸಮೇತ ರಸ್ತೆಗೆ ಬಿದ್ದಿದ್ದಿದ್ದರು. ಈ ವೇಳೆ ಸವಾರ ಅಕಾಶ್ ಅಜಯ್‌ಗೆ ಬಲ ಕ್ಕೆ ಹಾಗೂ ಬಲ ಕೈಯ ಹೆಬ್ಬೆರಳಿಗೆ ಮೂಳೆ ಮುರಿತ ಹಾಗೂ ಗದ್ದಕ್ಕೆ ರಕ್ತಗಾಯವಾಗಿದ್ದು ಸಹ ಸವಾರ ಮೃತ ರಿಯಾ ಅಂಟನಿಯ ರವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಬಳಿಕ ನಗರದ ಕೋಡಿಯಾಲ್ ಬೈಲ್ ಯೇನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಈ ಬಗ್ಗೆ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಭಾಗಶಃ ತನಿಖೆಯನ್ನು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಪೊಲೀನ್ ಉಪ ನಿರೀಕ್ಷಕ ಜಗನ್ನಾಥ್ ನಡೆಸಿ ನಂತರ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಯಾನಂದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಸಾಕ್ಷಿ ವಿಚಾರಣೆ ನಡೆಸಿ, ವಾದ ವಿವಾದ ಆಲಿಸಿದ ನಂತರ ಮಂಗಳೂರು ಜೆ.ಎಂ.ಎಫ್.ಸಿ. 8ನೇ ನ್ಯಾಯಾಲಯದ ನ್ಯಾಯಾಧೀಶ ಫವಾಜ್ ಪಿ.ಎ. ಅವರು ಬುಧವಾರ ಆರೋಪಿತನಿಗೆ ಆರು ತಿಂಗಳ ಕಾಲ ಜೈಲುವಾಸ ಹಾಗೂ 7,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಗೀತಾ ರೈ ರವರು ಭಾಗಶಃ ಸಾಕ್ಷಿ ವಿಚಾರಣೆ ನಡೆಸಿದ್ದು, ಸಹಾಯಕ ಸರ್ಕಾರಿ ಅಭಿಯೋಜಕ ಆರೋನ್ ಡಿ ಸೋಜಾ ವಿಟ್ಲ ರವರು ಉಳಿದ ಸಾಕ್ಷಿ
ವಿಚಾರಣೆ ನಡೆಸಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.