ಬ್ರಹ್ಮಕುಮಾರಿ ಸಂಸ್ಥೆ ವತಿಯಿಂದ ‘ಭಗವದ್ಗೀತಾ ಸಪ್ತಾಹ ಧಾರ್ಮಿಕ ಉಪನ್ಯಾಸ’ ಕಾರ್ಯಕ್ರಮ
ಪ್ರತಿದಿನ ಸಂಜೆ 7 ಗಂಟೆಯಿಂದ 8 ಗಂಟೆಯವರೆಗೆ ನಡೆಯುತ್ತಿರುವ ಈ ಉಪನ್ಯಾಸ ಮಾಲಿಕೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಜನರು ನಿಯಮಿತವಾಗಿ ಭಾಗವಹಿಸಿ, ಕಾರ್ಯಕ್ರಮದಲ್ಲಿ ಶ್ರೀಮದ್ಭಗವದ್ಗೀತೆಯ ಆಧ್ಯಾತ್ಮಿಕ ಸಾರ, ಮಾನವ ಜೀವನದಲ್ಲಿ ಗೀತೆಯ ಪ್ರಾಯೋಗಿಕ ಮಹತ್ವ, ಆತ್ಮಜ್ಞಾನ, ಮಾನಸಿಕ ಶಾಂತಿ ಹಾಗೂ ಮೌಲ್ಯಾಧಾರಿತ ಜೀವನಶೈಲಿ ಕುರಿತು ವಿವರವಾಗಿ ತಿಳಿಸಿಕೊಡಲಾಗುತ್ತಿದ್ದು, ಸಪ್ತಾಹದ ಪ್ರಮುಖ ಆಕರ್ಷಣೆಯಾಗಿರುವುದು ಗೀತಾ ಶ್ಲೋಕ ಪಠಣೆಯಾಗಿದೆ.
ಕಾರ್ಯಕ್ರಮದ ಮುಖ್ಯ ವಕ್ತಾರರಾದ ಮಂಗಳೂರಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಕುಮಾರಿ ವಿಶ್ವೇಶ್ವರಿ ಅವರು ಗೀತೆಯ ಶ್ಲೋಕಗಳನ್ನು ಸರಳ ಉದಾಹರಣೆಗಳ ಮೂಲಕ ವಿವರಿಸುತ್ತಿದ್ದು, ಶ್ರೋತೃಗಳಲ್ಲಿ ಆತ್ಮಪರಿವರ್ತನೆ ಮತ್ತು ಆಂತರಿಕ ಶಾಂತಿಯ ಅನುಭವ ಉಂಟಾಗುತ್ತಿದೆ.
ಉಪನ್ಯಾಸದ ಬಳಿಕ ಧ್ಯಾನಾಭ್ಯಾಸಕ್ಕೂ ಅವಕಾಶ ನೀಡಲಾಗುತ್ತಿದ್ದು, ಭಾಗವಹಿಸುತ್ತಿರುವ ಭಕ್ತರು ಕಾರ್ಯಕ್ರಮವು ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಹಕಾರಿಯಾಗುತ್ತಿದೆ ಎಂದು ಹೇಳಿದ್ದಾರೆ.
ಈ ಗೀತಾ ಸಪ್ತಾಹವು ಜನವರಿ 13ರವರೆಗೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಇದರ ಲಾಭ ಪಡೆಯುವಂತೆ ಬ್ರಹ್ಮ ಕುಮಾರಿ ವಿಶ್ವೇಶ್ವರಿ ಮನವಿ ಮಾಡಿದ್ದಾರೆ.