ಕಾಂಗ್ರೆಸ್ ಸರ್ಕಾರದಿಂದ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ದಮನಿಸುವ ಕಾರ್ಯ: ಸತೀಶ್ ಕುಂಪಲ ಆಕ್ರೋಶ
ಹಿಂದು ಸಮಾಜಕ್ಕೆ, ಧರ್ಮಕ್ಕೆ ಯಾವುದೇ ಅನ್ಯಾಯ ಅಥವಾ ದಾಳಿಯಾದಾಗ ಸದಾ ಮುಂಚೂಣಿಯಲ್ಲಿದ್ದು ಹೋರಾಡುವ, ಭಟ್ ರವರು ಹಿಂದು ಸಮಾಜದ ಶಕ್ತಿ ಮತ್ತು ಆಸ್ಥಿಯಾಗಿದ್ದಾರೆ. ಅವರ ಸಾಮಾಜಿಕ ಕಾಳಜಿ ಅಪಾರವಾಗಿದೆ. ತಮ್ಮ ಶಿಕ್ಷಣ ಸಂಸ್ಥೆಗಳ ಮೂಲಕ ಲಕ್ಷಾಂತರ ವಿಧ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ಹಸನು ಗೊಳಿಸಿದವರು.
ಕಲ್ಲಡ್ಕ ಪ್ರಭಾಕರ ಭಟ್, ಅಂತವರ ಮೇಲೆ ಕಾಂಗ್ರೆಸ್ ಸರ್ಕಾರ ಕೇವಲ ಓಲೈಕೆ ರಾಜಕೀಯದ ಲಾಲಸೆಗೆ ಅನಗತ್ಯವಾಗಿ ಕೇಸು ದಾಖಲಿಸುವ ಮೂಲಕ ದಮನಕಾರಿ ನೀತಿಯನ್ನು ತೋರಿಸುತ್ತಿದೆ. ಇದನ್ನು ತಕ್ಷಣ ಕೈಬಿಡಬೇಕೆಂದು ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಹಿಂದು ನಾಯಕರ, ಕಾರ್ಯಕರ್ತರ ಮೇಲೆ ದಾಳಿ, ಹಿಂದು ಶ್ರದ್ಧೆಗಳ ಅವಮಾನಗಳು, ಸಂಪ್ರದಾಯಗಳಿಗೆ ಕೊಡಲಿಯೇಟು ಅವ್ಯಾಹತವಾಗಿ ನಡೆಯುತ್ತಿದೆ. ಕಾಂಗ್ರೆಸ್‌ನ ಪಾಪದ ಕೊಡ ತುಂಬುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.