ಮೆಸ್ಕಾಂ ಸಿಬ್ಬಂದಿಗಳಿಗೆ ರಕ್ತದಾನ ಮತ್ತು ಉಚಿತ ವೈದ್ಯಕೀಯ ತಪಾಸಣೆ ಶಿಬಿರ
ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರು ಶಿಬಿರ ಉದ್ಘಾಟಿಸಿ ಮತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠ ದಾನವಾಗಿದ್ದು, ಕೆಇಬಿಇಎ ಕಾರ್ಯ ಅಭಿನಂದನೀಯ. ಮೆಸ್ಕಾಂ ಉದ್ಯೋಗಿಗಳಿಗೆ ಆರೋಗ್ಯ ಸಂರಕ್ಷಣೆಗೆ ವ್ಯೆದ್ಯಕೀಯ ತಪಾಸಣೆ ಕೂಡಾ ಅತ್ಯಗತ್ಯ ಎಂದ ಅವರು ಮುಂದಿನ ದಿನಗಳಲ್ಲಿ ಬೊಂದೇಲ್ ಪರಿಸರದ ನಾಗರಿಕರಿಗೂ ಅನುಕೂಲವಾಗುವಂತೆ ಶಿಬಿರಗಳನ್ನು ಏರ್ಪಡಿಸಿ, ಆ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಿ ಎಂದು ಹೇಳಿದರು.
ಮುಖ್ಯ ಅತಿಥಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್. ಮಾತನಾಡಿ, ರಕ್ತದಾನ ಇನ್ನೊಬ್ಬರಿಗೆ ಜೀವದಾನ ನೀಡುತ್ತದೆ. ಪ್ರತಿಯೋರ್ವರು ಈ ಉದಾತ್ತ ಕಾರ್ಯದಲ್ಲಿ ಭಾಗವಹಿಸಬೇಕು. ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದ ಅವರು ರಕ್ತದಾನ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಿರುವ ಕೆಇಬಿಇಎಯನ್ನು ಅಭಿನಂದಿಸಿದರಲ್ಲದೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕನಾಗಿ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಸಂಪೂರ್ಣ ಸಹಕಾರ ನೀಡುವುದಾಗಿಯೂ ತಿಳಿಸಿದರು.
ಕೆಇಬಿಇಎ ಮಂಗಳೂರು ವಲಯದ ಅಧ್ಯಕ್ಷ ರವಿಕಾಂತ ಆರ್. ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಮೆಸ್ಕಾ೦ ತಾ೦ತ್ರಿಕ ನಿದೇ೯ಶಕ ಹರೀಶ್ ಕುಮಾರ್ ವಿ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷರುಗಳಾದ ಕೃಷ್ಣರಾಜ್ ಕೆ., ಚೈತನ್ಯ, ಮೆಸ್ಕಾಂ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಂಘದ ಹಿರಿಯ ಸದಸ್ಯ ಮಂಜಪ್ಪ ಮತ್ತು ಲೆಕ್ಕಾಧಿಕಾರಿಗಳ ಸಂಘದ ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್, ನೌಕಕರ ಸಂಘಟನೆಯ ಉಪಾಧ್ಯಕ್ಷ ಶಂಕರ್ ಪ್ರಸಾದ್ ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ಲೋಹಿತ್ ಬಿ.ಎಸ್. ಅವರು ಸ್ವಾಗತಿಸಿದರು. ಕಾರ್ಯದರ್ಶಿ ಅಭಿಷೇಕ್ ವಂದಿಸಿ, ಲಾವಣ್ಯ ನಿರೂಪಿಸಿದರು.
ಮೆಸ್ಕಾಂ ಹಾಗೂ ಕವಿಪ್ರನಿನಿ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದು, 185 ಮಂದಿ ವೈದ್ಯಕೀಯ ತಪಾಸಣೆ ಮಾಡಿಸಿದರು. 70 ಮಂದಿ ರಕ್ತದಾನ ಮಾಡಿದರು. ೬೯ ಮಂದಿ ರಕ್ತ ತಪಾಸಣೆ ಮಾಡಿಸಿದರು.