ಬಾಲಕಿಯರ ಕ್ರೀಡಾ ಪತ್ರಿಭೆಗೆ ಹೆತ್ತವರ ಪ್ರೋತ್ಸಾಹ ಮುಖ್ಯ: ಪಿ.ಟಿ. ಉಷಾ

ಬಾಲಕಿಯರ ಕ್ರೀಡಾ ಪತ್ರಿಭೆಗೆ ಹೆತ್ತವರ ಪ್ರೋತ್ಸಾಹ ಮುಖ್ಯ: ಪಿ.ಟಿ. ಉಷಾ


ಮಂಗಳೂರು: ಬಾಲಕಿಯರಿಗೆ ಕ್ರೀಡೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹೆತ್ತವರು ಪ್ರೋತ್ಸಾಹ ನೀಡಬೇಕೆಂದು ಖ್ಯಾತ ಓಟದ ರಾಣಿ ಪಿ.ಟಿ. ಉಷಾ ಹೇಳಿದ್ದಾರೆ.

‘ಗೇರ್ ಫಾರ್ ಗೋಲ್ಡ್’ ಕಾರ್ಯಕ್ರಮದ ಭಾಗವಾಗಿ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್‌ನ  ಸಂಸ್ಥಾಪಕಿ ಪಿ.ಟಿ. ಉಷಾ, ಇನ್ಫೋಸಿಸ್ ಫೌಂಡೇಶನ್ ಮತ್ತು ಗೋಸ್ಪೋರ್ಟ್ಸ್ ಫೌಂಡೇಶನ್ ಸಹಯೋಗದೊಂದಿಗೆ ರವಿವಾರ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ತಮ್ಮ ತಂಡದೊಂದಿಗೆ ಯುವ ಅಥ್ಲಿಟ್‌ಗಳ ಪ್ರತಿಭಾ ಆನ್ವೇಷಣಾ ಶಿಬಿರವನ್ನು ನಡೆಸಿದ ಅವರು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. 

ಅನೇಕ ಸಂದರ್ಭಗಳಲ್ಲಿ, ಪದಕಗಳನ್ನು ಗೆದ್ದ ನಂತರವೇ ಕ್ರೀಡಾ ಪ್ರತಿಭೆಗೆ ಬೆಂಬಲ ಸಿಗುತ್ತದೆ. ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆಲ್ಲಲು ಸಾಧ್ಯವಾಗುವಂತೆ ತಳಮಟ್ಟದಲ್ಲಿ ಪ್ರತಿಭೆಯನ್ನು ಪೋಷಿಸುವ ಅವಶ್ಯಕತೆಯಿದೆ ’ಎಂದರು. 

ಬಾಲಕಿಯರ ಅಥ್ಲೆಟಿಕ್ಸ್ ಪ್ರತಿಭಾ ಗುರುತಿನ ಕಾರ್ಯಕ್ರಮಗಳು ಜನವರಿ 31 ರಂದು ಮಧುರೈನಲ್ಲಿ ಮತ್ತು ಫೆಬ್ರವರಿ 7 ರಂದು ವಿಜಯವಾಡದಲ್ಲಿ ನಡೆಯಲಿವೆ. 

ಮಂಗಳೂರು, ಮಧುರೈ ಮತ್ತು ವಿಜಯವಾಡದಿಂದ ಆಯ್ಕೆಯಾದ ಕ್ರೀಡಾಪಟುಗಳು ಫೆಬ್ರವರಿಯಲ್ಲಿ ಕೇರಳದ ಕಿನಲೂರಿನಲ್ಲಿರುವ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ನಲ್ಲಿ ನಡೆಯುವ ಅಂತಿಮ ಸುತ್ತಿನ ಆಯ್ಕೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ ಎಂದಿದ್ಧಾರೆ. 

ಮಂಗಳೂರಿನಲ್ಲಿ, 11 ರಿಂದ 14 ರ ಹರೆಯದ ಸುಮಾರು 500 ಯುವ ಕ್ರೀಡಾಪಟುಗಳು ಆಯ್ಕೆ ಶಿಬಿರದಲ್ಲಿ ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article