ಎಂಸಿಎಫ್ ಮಂಗಳೂರಿನ ಅಸ್ಮಿತೆ: ಶೂರಪಾಲಿ
Tuesday, January 20, 2026
ಮಂಗಳೂರು: ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ (ಎಂಸಿಎಫ್) ಮಂಗಳೂರಿನ ಅಸ್ಮಿತೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಡಾ. ಎನ್. ಬಿ. ಶೂರಪಾಲಿ ಹೇಳಿದ್ದಾರೆ.
ಎಂಸಿಎಫ್ ಹೆಸರು ಪ್ಯಾರಾದೀಪ್ ಪಾಸ್ಫೇಟ್ಸ್ ಲಿಮಿಟೆಡ್ ಆಗಿದೆ. ಇದರಿಂದ ಎಂಸಿಎಫ್ ಹೆಸರು ಜನಮಾನಸದಿಂದ ಅಳಿಸಿಹೋಗಲಿದೆ. ಎಂಸಿಎಫ್ ಹೆಸರು ಕಳೆದ 55 ವರ್ಷಗಳಿಂದ ಮಂಗಳೂರಿನೊದಿಗೆ ಬೆಸೆದಿದೆ. ಈ ಕಾರ್ಖಾನೆಗೆ ಭೂಮಿ ನೀಡಿದ್ದು ಮಂಗಳೂರಿನ ಜನತೆ. ಸ್ಥಳೀಯ ಜನರ ತ್ಯಾಗ ಈ ಕಾರ್ಖಾನೆಯ ಸ್ಥಾಪನೆಯ ಹಿಂದೆ ಇದೆ. ಅದು ಬಳಸುವ ನೀರು ಕೂಡ ನಮ್ಮದೇ. ಹೀಗಿರುವಾಗ ಏಕಾಏಕಿ ಹೆಸರು ಬದಲಾವಣೆ ಮಾಡಿದ್ದು ಮಂಗಳೂರಿನ ಅಸ್ಮಿತೆಯನ್ನು ಪ್ರಶ್ನೆ ಮಾಡಿದಂತಾಗಿದೆ ಆದ್ದರಿಂದ ಎಂಸಿಎಫ್ ಹೆಸರು ಮುಂದುವರೆಸುವುದು ಸೂಕ್ತ ಎಂದಿದ್ದಾರೆ.
ಈ ದಿಸೆಯಲ್ಲಿ ರಾಜಕೀಯ ಲಾಭ ಪಡೆಯುವುದನ್ನು ಬಿಟ್ಟು ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕಾಗಿದೆ. ಪ್ಯಾರಾದೀಪ್ ಆಡಳಿತ ಮಂಡಳಿಗೆ ವಾಸ್ತವದ ಅರಿವು ಮೂಡಿಸಿ ಎಂಸಿಎಫ್ ಹೆಸರು ಮುಂದುವರೆಸುವಂತೆ ಮನವಿ ಮಾಡಬೇಕು ಎಂದು ಹೇಳಿದ್ದಾರೆ.