ಖಾಲಿ ಗೂಡ್ಸ್ ರೈಲು ಓಡಾಟದಿಂದ ಆಗುವ ಟ್ರಾಫಿಕ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿ, ಅಧಿಕಾರಿ, ಸಾರ್ವಜನಿಕರ ಸಭೆ
ಸಂಸದ ಬ್ರಿಜೇಶ್ ಚೌಟರವರು ಮಾತನಾಡಿ ಸದ್ಯಕ್ಕೆ ತಾತ್ಕಾಲಿಕವಾಗಿ ಬೆಳಿಗ್ಗೆ ಮತ್ತು ಸಂಜೆಯ ಪೀಕ್ ಸಮಯದಲ್ಲಿ ರೈಲು ಸಂಚಾರ ತಪ್ಪಿಸಬೇಕು. ಮುಂದಿನ ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ ಹಾಗೂ ರೈಲ್ವೆ ಅಧಿಕಾರಿಗಳು ಸಮನ್ವಯತೆಯಿಂದ ಸಮಗ್ರ ವರದಿ ತಯಾರಿಸಬೇಕು ಹಾಗೂ ಅದನ್ನು ಪರಿಶೀಲನೆ ನಡೆಸುವ ಬಗ್ಗೆ ಸೂಚನೆ ನೀಡಿದರು.
ಹೊಯಿಗೆ ಬಜಾರ್ ಲೆವೆಲ್ ಕ್ರಾಸಿಂಗ್ ಬಳಿಯೂ ಇದೇ ಪರಿಸ್ಥಿತಿಯಿದ್ದು ಇಲ್ಲಿರುವ ಯಾರ್ಡನ್ನು ಸ್ಥಳಾಂತರಿಸುವ ಬಗ್ಗೆ, ಬೇರೆಡೆ ಸೂಕ್ತ ಪ್ರದೇಶ ನಿಗದಿಗೊಳಿಸುವ ಬಗ್ಗೆ, ಡಿ.ಆರ್.ಎಂ ಜೊತೆ ಮಾತುಕತೆ ನಡೆಸಿ ರಸ್ತೆ ಅಗಲ ಮಾಡಿ ಡಬಲ್ ಗೇಟ್ ನಿರ್ಮಿಸುವ ಬಗ್ಗೆಯೂ ಚರ್ಚೆ ನಡೆಯಿತು.
ಇದೇ ವೇಳೆ ನೂಜಿ ಅಂಡರ್ ಪಾಸ್, ಕಂಡೇವು ಹಾಗೂ ಅಳಪೆ ಮಠದ ಬಳಿ ಓವರ್ ಪಾಸ್, ಎಕ್ಕೂರು ಡ್ರೈನೇಜ್ ಸಮಸ್ಯೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರಸ್ತಾಪವಾಯಿತು.
ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಮಾಜಿ ಮೇಯರ್ ಗಳಾದ ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಪಾಲಿಕೆ ಹಿರಿಯ ಅಭಿಯಂತರರಾದ ನರೇಶ್ ಶೆಣೈ, ಪ್ರಮುಖರಾದ ಧರ್ಮರಾಜ್, ರವಿಶಂಕರ್ ಮಿಜಾರು, ನಿತಿನ್ ಕುಮಾರ್, ಉಮಾನಾಥ್ ಕೋಟೆಕಾರ್, ಬಿಜೆಪಿ ನಿಕಟ ಪೂರ್ವ ಪಾಲಿಕೆ ಸದಸ್ಯರುಗಳಾದ, ಭರತ್ ಕುಮಾರ್ ಸೂಟರ್ ಪೇಟೆ, ಶೈಲೇಶ್ ಶೆಟ್ಟಿ, ಶೋಭಾ ಪೂಜಾರಿ, ಸಂದೀಪ್ ಗರೋಡಿ, ಅಜಯ್ ಕುಲಶೇಖರ, ಪಾಲಿಕೆ ಅಧಿಕಾರಿಗಳು, ರೈಲ್ವೆ ಅಧಿಕಾರಿಗಳು, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

