ಇ-ಆಟೋರಿಕ್ಷಾ ಪರವಾನಿಗೆ ಪಡೆಯಲು ಸೂಚನೆ

ಇ-ಆಟೋರಿಕ್ಷಾ ಪರವಾನಿಗೆ ಪಡೆಯಲು ಸೂಚನೆ

ಮಂಗಳೂರು: ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣದ ಆದೇಶದಂತೆ ಮಂಗಳೂರು ನಗರದಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಿಸುವ ಬಗ್ಗೆ ನಿಬಂಧನೆಗಳನ್ನು ವಿಧಿಸಿ, ಪರವಾನಿಗೆಯನ್ನು ವಿತರಿಸಲು  ಜಿಲ್ಲಾಧಿಕಾರಿಗಳು ನಿರ್ಣಯಿಸಿರುತ್ತಾರೆ.

2022 ರ  ಜನವರಿ 20 ರಿಂದ 2025 ರ ಅಕ್ಟೋಬರ್ 30 ರವರೆಗೆ ಬ್ಯಾಟರಿ ಚಾಲಿತ ಇಂಧನ ಬಳಸಿ ರಹದಾರಿ ಪಡೆಯದೇ ನೊಂದಣಿಯಾಗಿರುವ ಹಾಗೂ ವಲಯ-1 ರ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಆಟೋರಿಕ್ಷಾಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ, ಪ್ರಾಧಿಕಾರದ ನಿಬಂಧನೆಗಳಿಗೆ ಒಳಪಟ್ಟು ಪರವಾನಿಗೆಯನ್ನು ಪಡೆದುಕೊಳ್ಳಬೇಕು. ಹಾಗೂ ವಲಯ 1 ರ ವ್ಯಾಪ್ತಿಗೆ ಬರುವ ಪರವಾನಿಗೆದಾರರು ಇ-ಆಟೋರಿಕ್ಷಾಗಳಿಗೆ ಆಕಾಶ ನೀಲಿ ಬಣ್ಣದ ಚೌಕಾರಾರದಲ್ಲಿ ಬಣ್ಣವನ್ನು ಬಳಿದು,  ಪೊಲೀಸ್ ಇಲಾಖೆಯಿಂದ ಗುರುತಿನ ಸಂಖ್ಯೆ ಪಡೆಯಬೇಕು.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕನಿಷ್ಠ ೫  ವರ್ಷ ನಿವಾಸಿಯಾಗಿರುವ ಬಗ್ಗೆ ವಾಸ ಸ್ಥಳದ ದೃಢೀಕರಣ ಪ್ರಮಾಣ ಪತ್ರ ಸಲ್ಲಿಸಬೇಕು. ಈಗಾಗಲೇ ಮಂಗಳೂರು ನಗರ ವ್ಯಾಪ್ತಿಯಲ್ಲಿ ಆಟೋರಿಕ್ಷಾ ಪರವಾನಿಗೆ ಹೊಂದಿರುವವರಿಗೆ ಇ-ಆಟೋರಿಕ್ಷಾ ಪರವಾನಿಗೆಯನ್ನು ಮಂಜೂರು ಮಾಡಲಾಗುವುದಿಲ್ಲ. ಒಬ್ಬರಿಗೆ ಒಂದೇ ಇ-ಆಟೋರಿಕ್ಷಾ ಪರವಾನಿಗೆಯನ್ನು ಮಂಜೂರು ಮಾಡಲಾಗುತ್ತದೆ. ಇ-ಆಟೋರಿಕ್ಷಾ ಪರವಾನಿಗೆಯನ್ನು ಪಡೆದುಕೊಂಡವರು ಕಡ್ಡಾಯವಾಗಿ ಆಟೋರಿಕ್ಷಾ ಚಾಲನೆ ಮಾಡುವ ಚಾಲನಾ ಪರವಾನಿಗೆ/ ಬ್ಯಾಡ್ಜ್ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ಪರವಾನಿಗೆದಾರನೆ ಆಟೋರಿಕ್ಷಾವನ್ನು ಚಾಲನೆ ಮಾಡಬೇಕು. ಕಾನೂನಾತ್ಮಕ ಹಾಗೂ ಆಡಳಿತದ ಹಿತದೃಷ್ಟಿಯಿಂದ ಪ್ರಾಧಿಕಾರಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ತಕ್ಷಣ ಪರವಾನಿಗೆಯನ್ನು ಪಡೆದುಕೊಳ್ಳುವಂತೆ ಉಪ ಸಾರಿಗೆ ಆಯುಕ್ತರು ಮತ್ತು  ಹಿರಿಯ ಆರ್.ಟಿ.ಒ ಕಚೇರಿ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article