ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತ ಪಡಿಸುವ ಉತ್ಕೃಷ್ಟ ಮಟ್ಟದ ‘ಬಸಂತ್ ಉತ್ಸವ್’ ಕಾರ್ಯಕ್ರಮ
Friday, January 30, 2026
ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇದರ ವತಿಯಿಂದ ಫೆಬ್ರವರಿ 1 ರಂದು ಸಂಜೆ 5 ಗಂಟೆಗೆ ‘ಬಸಂತ್ ಉತ್ಸವ್’ ಎಂಬ ಸಂಗೀತ ಕಾರ್ಯಕ್ರಮ ಮಂಗಳೂರು ಉರ್ವ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಪೂರ್ವಾಧದಲ್ಲಿ ರಾಷ್ಟ್ರಮಟ್ಟದ ಖ್ಯಾತಿಯ ಕಲಾವಿದರಾದ ಪಂ. ಮಲ್ಯಬನ್ ಚಟರ್ಜಿ ಯವರ ಶಾಸ್ತ್ರೀಯ ಗಾಯನ ತದನಂತರ ಪಂ.ಆಶಿಶ್ ಸೇನ್‌ಗುಪ್ತಾ ಅವರ ತಬ್ಲಾ ಸೋಲೋ ಕೊನೆಯ ಭಾಗದಲ್ಲಿ ಪಂ.ಪಾರ್ಥ ಬೋಸ್ ರವರಿಂದ ಸಿತಾರ್ ವಾದನ ನಡೆಯಲಿದೆ. ಹಾಗೂ ಈ ಬಸಂತ್ ಉತ್ಸವ್ ಕಾರ್ಯಕ್ರಮಕ್ಕೆ ಸಾರಂಗಿಯಲ್ಲಿ ಸರ್ಫ್‌ರಾಜ್ ಖಾನ್ ಮತ್ತು ತಬ್ಲಾದಲ್ಲಿ ಗುರುರಾಜ ಆಡುಕ್ಕಳ ರವರು ಸಾಥ್ ನೀಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.