ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗದ ಶೌಚಾಲಯ: ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ
Saturday, January 17, 2026
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯು 2018-19ರಲ್ಲಿ ಓಎನ್‌ಜಿಸಿ ಎಂಆರ್‌ಪಿಎಲ್ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯವು ಸಾರ್ವಜನಿಕರ ಉಪಯೋಗಕ್ಕೆ ತೆರೆಯದಿರುವ ಬಗ್ಗೆ ಕಳೆದ ಐದು ವರ್ಷಗಳಲ್ಲಿ ಎರಡು-ಮೂರು ಬಾರಿ ಪಾಲಿಕೆಯ ಗಮನಕ್ಕೆ ತಂದರೂ ಪೂರ್ಣ ಪ್ರಮಾಣದಲ್ಲಿ ಈ ಶೌಚಾಲಯ ಸಾರ್ವಜನಿಕರಿಗೆ ತೆರೆಯದಿರುವುದರಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ, ವಾಹನ ಚಾಲಕರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು.
ಈ ಶೌಚಾಲಯವನ್ನು ಶೀಘ್ರದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ತೆರೆಯಲು ಒತ್ತಾಯಿಸಿ ಆಮ್ ಆದ್ಮಿ ಪಕ್ಷವು ಪ್ರತಿಭಟನೆಯನ್ನು ನಡೆಸಿತು. ಸಾರ್ವಜನಿಕರ ಪರವಾಗಿ ವಿದ್ಯಾರ್ಥಿ ಪರಶುರಾಮ, ಗೃಹಿಣಿ ಗಂಗಮ್ಮ ಹಾಗೂ ಆಟೋ ಚಾಲಕಿ ಸುನೀತಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಎಸ್.ಎಲ್. ಪಿಂಟೊ, ವೆಂಕಟೇಶ್ ಬಾಳಿಗ, ಪ್ರಸಾದ್ ಬಜಿಲಕೇರಿ, ಲೆಸ್ಲಿ ಫೆರ್ನಾಂಡಿಸ್, ನಜೀರ್ ಅಹ್ಮದ್ ಬಾವ, ಕಬೀರ್ ಕಾಟಿಪಳ್ಳ, ರೋಶನ್ ಪೆರಿಸ್, ವಾಸುದೇವ್, ಸಿಮಾ ಮಡಿವಾಳ, ಸುಜಾತ, ವೇಣುಗೋಪಾಲ ಪುಚ್ಚುಪಾಡಿ, ಮತ್ತಿತರರು ಉಪಸ್ಥಿತರಿದ್ದರು.

