ಪಿಲಿಕುಳ ರೆಸಾರ್ಟ್ ಉದ್ಘಾಟಿಸಿದ ಸಿಎಂ
ಇದೇ ಸಂದರ್ಭ ಸಿಎಂ ಅವರು ಪ್ರವಾಸೋದ್ಯಮ ಡೈರಿ, ಕ್ಯಾಲೆಂಡರ್ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೊಬೈಲ್ ಆಪ್ ಬಿಡುಗಡೆಗೊಳಿಸಿದರು.
ಬಳಿಕ ರೆಸಾರ್ಟ್ ಕುರಿತು ಮಾಹಿತಿ ನೀಡಿದ ಕೆ.ಎಸ್.ಟಿ.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಪಿಲಿಕುಳದಲ್ಲಿ ರೆಸಾರ್ಟ್ ನವೀಕರಿಸಲಾಗಿದೆ. ಸುಸಜ್ಜಿತ ಕೊಠಡಿಗಳು, ರೆಸ್ಟೋರೆಂಟ್, ಸಭಾಂಗಣ, ವಿಶಾಲ ಪಾರ್ಕಿಂಗ್ ಜಾಗ ಸಹಿತ ಆಧುನಿಕ ವ್ಯವಸ್ಥೆ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಹಂತ ಹಂತವಾಗಿ ನವೀಕರಣಗೊಳಿಸಲಾಗುವುದು ಎಂದರು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ್ ಕುಮಾರ್ ಅವರು ಪಿಲಿಕುಳದ ವಿಶೇಷತೆ, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಪಿಲಿಕುಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಚಿವ ರಮಾನಾಥ ರೈ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷ ಶ್ರೀನಿವಾಸ್ ಮತ್ತಿತರರು ಇದ್ದರು.
ಪಿಲಿಕುಳ ರೆಸಾರ್ಟ್ ಉದ್ಘಾಟನೆ ಬಳಿಕ ಅಲ್ಲಿನ ನೂತನ ಅಂತಾರಾಷ್ಟ್ರೀಯ ದರ್ಜೆಯ ಗಾಲ್ಫ್‌ಕೋರ್ಸ್‌ಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ಗಾಲ್ಫ್ ಆಡಿ ಗಮನ ಸೆಳೆದರು. ಸಚಿವರಾದ ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಝೀರ್ ಅಹ್ಮದ್, ಎಂಎಲ್ಸಿ ಐವನ್ ಡಿಸೋಜ ಮತ್ತಿತರರು ಇದ್ದರು.