ಸ್ಥಳ ಮಹಜರಿಗೆ ರಾಜೀವ್‌ಗೌಡ ಮಂಗಳೂರಿಗೆ
Thursday, January 29, 2026
ಮಂಗಳೂರು: ಕೆಎಎಸ್ ಅಧಿಕಾರಿ ಅಮೃತಾಗೌಡಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡನನ್ನು ಮಂಗಳೂರಿಗೆ ಸ್ಥಳ ಮಹಜರಿಗೆ ಪೊಲೀಸರು ಕರೆತಂದಿದ್ದಾರೆ.
ಶಿಡ್ಲಘಟ್ಟದಿಂದ ತಲೆಮರೆಸಿಕೊಂಡು ಮಂಗಳೂರಿನ ಮೈಕಲ್‌ನ ಫಾರ್ಮ್ ಹೌಸ್‌ನಲ್ಲಿ ರಾಜೀವ್ ಗೌಡ ತಂಗಿದ್ದು, ಅದರೊಂದಿಗೆ ಪಚ್ಚನಾಡಿಯಲ್ಲಿರೋ ಜಾಕ್ ಡಿಸೈನ್ ಸ್ಟೋರ್‌ನಲ್ಲಿ ಆಶ್ರಯ ಪಡೆದಿರುವ ಬಗ್ಗೆ ಮಾಹಿತಿಯಿಂದಾಗಿ ಶಿಡ್ಲಘಟ್ಟ ವೃತ್ತ ನಿರೀಕ್ಷಕ ಆನಂದ್ ಕುಮಾರ್ ನೇತೃತ್ವದಲ್ಲಿ ಮಂಗಳೂರಿಗೆ ಆಗಮಿಸಿದ್ದಾರೆ.