ಕಸ ಹಾಕುವ ಮನಸ್ಥಿತಿ ತೊರೆಯಲು ಕಾರಣ ಕಸ ಹೆಕ್ಕುವ ಆಂದೋಲನ: ಉಮಾನಾಥ್ ಕೋಟೆಕಾರ್
ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಮಂಗಳೂರು ಶಾಖೆಯ ಆಶ್ರಯದಲ್ಲಿ ‘ಸ್ವಚ್ಛತಾ ಹೀ ಸೇವಾ’ ದ್ಯೇಯದೊಂದಿಗೆ ನಡೆದ ಹದಿನಾರನೇ ಸ್ವಚ್ಛ ಭಾರತ ಶ್ರಮದಾನದಲ್ಲಿ ಭಾಗವಹಿಸಿದ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿಡದರು.
ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದ ಪತ್ರಕರ್ತ ಗುರುಪ್ರಸಾದ್ ಎಸ್. ಅವರು, ನಾಗರಿಕ ಸಮಾಜದಲ್ಲಿ ಸ್ವಚ್ಛತೆಯ ಪರಿಪಾಠವು ನಮ್ಮ ಮನೆ, ಮನದಾಳದಿಂದ ಮೂಡಬೇಕು, ಈ ನಿಟ್ಟಿನಲ್ಲಿ ಪ್ರತೀ ಮನೆಗಳಂತೆ ಸಂಘ ಸಂಸ್ಥೆಗಳೂ ಜವಾಬ್ದಾರಿಯುತ ಪಾತ್ರವನ್ನು ಹೊಂದಿರುತ್ತದೆ. ಈ ಹಿನ್ನಲೆಯಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ಒಂದು ಉತ್ತಮ ಉದಾಹರಣೆ ಎಂದರು.
ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ. ಎಸ್.ಆರ್. ಹರೀಶ್ ಆಚಾರ್ಯ, ಮಂಗಳೂರು ಮಹಾನಗರ ಪಾಲಿಕೆಯ ಮರೋಳಿ ವಾರ್ಡ್‌ನ ನಿಕಟಪೂರ್ವ ಸದಸ್ಯ ಕೇಶವ ಮಾರೋಳಿ, ಯಮುನಾ ರೆಸಿಡೆನ್ಸಿ ಕಟ್ಟಡ ಮಾಲೀಕರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಎಸ್.ಸಿ. ವರ್ಮ ಇವರುಗಳು ಹಸಿರು ನಿಶಾನೆ ತೋರುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು.
ಬಳಿಕ ಮರೋಳಿಯ ಬಾಕಿಮಾರು ಜುಂಕ್ಷನ್, ಯಮುನಾ ರೆಸಿಡೆನ್ಸಿ, ಸೂರ್ಯನಾರಾಯಣ ದೇವಸ್ಥಾನ ರಸ್ತೆ, ಜಯನಗರ ರಸ್ತೆ ಪರಿಸರಗಳಲ್ಲಿ ಸ್ವಚ್ಛತಾ ಶ್ರಮದಾನ ಜರುಗಿತು.
ವಿಶ್ವಕರ್ಮ ಸಹಕಾರ ಬ್ಯಾಂಕಿನ ನಿರ್ದೇಶಕ ಹರಿಪ್ರಸಾದ್, ವ್ಯವಸ್ಥಾಪಕ ನಿರ್ದೇಶಕರಾದ ವಸಂತ ಅಡ್ಯಂತಾಯ, ದಕ್ಷಿಣ ಕನ್ನಡ ಚಿನ್ನದ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹಳೇಜಿ, ಸಾಮಾಜಿಕ ಕಾರ್ಯಕರ್ತ ಅರುಣ್ ಶೆಟ್ಟಿ ಮರೋಳಿ, ಭಾಸ್ಕರ ದೇವಾಡಿಗ, ಯಮುನಾ ರೆಸಿಡೆನ್ಸಿ ಕಟ್ಟಡ ಮಾಲಕರ ಸಂಘ (ರಿ.) ಇದರ ಪದಾಧಿಕಾರಿಗಳಾದ ರಾಧಾಕೃಷ್ಣ ರೈ, ಸಂಜೀವ ರೈ, ಪುರಂದರ ಶೆಟ್ಟಿ, ಡಾ. ಮಹೇಶ್ ಶೇಣವ, ಮಂಜುನಾಥ್ ಕುಲಕರ್ಣಿ, ಬಾಲಕೃಷ್ಣ ಶೆಟ್ಟಿ, ವಾಣಿ ರೈ, ಮಮತಾ ರೋಹಿತ್ ರಾಜ್ ಮತ್ತಿತರರು, ಕರಸೇವಾ ಬಳಗ ಶ್ರೀ ಸೂರ್ಯನಾರಾಯಣ ದೇವಸ್ಥಾನ ಮರೋಳಿ, ಹಿಂದೂ ಯುವ ಸೇನೆ ಸೂರ್ಯನಾರಾಯಣ ಶಾಖೆ, ಮರೋಳಿ ಯುವಕ ಮಂಡಳ (ರಿ.), ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಅಭಿಮನ್ಯು ಶಾಖೆ ಇದರ ಕಾರ್ಯಕರ್ತರು, ಬ್ಯಾಂಕಿನ ಸದಸ್ಯರು, ಗ್ರಾಹಕರು ಹಾಗೂ ಸಿಬ್ಬಂದಿಗಳು ಸ್ವಯಂಸೇವಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದರು.