ನರ್ಮ್ ಬಸ್ ಪುನರಾರಂಭಿಸುವಂತೆ ಡಿವೈಎಫ್‌ಐ ಮನವಿ
Friday, January 30, 2026
ಮಂಗಳೂರು: ಮಂಗಳೂರು ಸ್ಟೇಟ್ ಬ್ಯಾಂಕ್‌ನಿಂದ ಬಜಾಲ್ ಚರ್ಚ್ ವರೆಗೆ ಸಂಚರಿಸುತ್ತಿದ್ದ ಸರಕಾರಿ ಕೆಎಸ್‌ಆರ್‌ಟಿಸಿ ನರ್ಮ್ ಬಸ್ ಪುನರಾರಂಭಿಸುವಂತೆ ಹಾಗೂ ಈ ಭಾಗಕ್ಕೆ ಹೆಚ್ಚುವರಿ ಸರಕಾರಿ ಬಸ್ಸು ಸೇವೆಗಳ ಒದಗಿಸಲು ಒತ್ತಾಯಿಸಿ ಕೆಎಸ್‌ಆರ್‌ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗೆ ಜ.30 ರಂದು ಡಿವೈಎಫ್‌ಐ ಬಜಾಲ್ ಪಕ್ಕಲಡ್ಕ ಘಟಕದ ಮುಖಂಡರುಗಳ ನಿಯೋಗ ಮನವಿ ಸಲ್ಲಿಸಿದೆ.
ನಿಯೋಗದಲ್ಲಿ ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ನಗರ ಮುಖಂಡ ಜಗದೀಶ್ ಬಜಾಲ್, ಬಜಾಲ್ ಪಕ್ಕಲಡ್ಕ ಘಟಕದ ಕಾರ್ಯದರ್ಶಿ ಧೀರಾಜ್ ಬಜಾಲ್, ಸ್ಥಳೀಯ ಡಿವೈಎಫ್‌ಐ ಮುಖಂಡರಾದ ದೀಪಕ್ ಬಜಾಲ್, ಯಶ್ ರಾಜ್, ಕಮಲಾಕ್ಷ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.