ಶಿಕ್ಷಕನಿಂದ ವಿದ್ಯಾಥಿ೯ಗೆ ಅಸ್ವಾಭಾವಿಕ ಲೈಂಗಿಕ ಕಿರುಕುಳ-ಫೊಕ್ಸೋ ಪ್ರಕರಣ ದಾಖಲು: ಬಂಧನ

ಶಿಕ್ಷಕನಿಂದ ವಿದ್ಯಾಥಿ೯ಗೆ ಅಸ್ವಾಭಾವಿಕ ಲೈಂಗಿಕ ಕಿರುಕುಳ-ಫೊಕ್ಸೋ ಪ್ರಕರಣ ದಾಖಲು: ಬಂಧನ


ಮೂಡುಬಿದಿರೆ: ಕಳೆದೆರಡು ವರುಷಗಳ ಹಿಂದೆ ಪ್ರೌಢಶಾಲೆಯ ವಿದ್ಯಾರ್ಥಿಯೋವ೯ನಿಗೆ ಅದೇ ಶಾಲೆಯ ಅಧ್ಯಾಪಕ  ಸ್ಪೆಶಲ್ ತರಗತಿಯ ಆಮಿಷವೊಡ್ಡಿ, ನಗ್ನ ವಿಡಿಯೋ ಚಿತ್ರೀಕರಿಸಿ ಲೈಂಗಿಕ ದೌರ್ಜನ್ಯ ಎಸಗಿದ  ಹೇಯ ಕೃತ್ಯ  ಇದೀಗ ಬೆಳಕಿಗೆ ಬಂದಿದ್ದು ಈ ಸಂಬಂಧ ಶಾಲಾ ಶಿಕ್ಷಕ ಅಲ್ತಾಫ್ ಎಂಬಾತನ ವಿರುದ್ಧ ಮೂಡುಬಿದಿರೆ ಪೊಲೀಸರು ಫೊಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

2023ರಲ್ಲಿ ಸಂತ್ರಸ್ತ ಬಾಲಕ ಪಳಕಳ ಬಳಿಯ ಅಲ್ ಫುರ್ಕಾನ್ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗ, ಗಣಿತ ವಿಷಯದಲ್ಲಿ ಹೆಚ್ಚು ಅಂಕ ಕೊಡಿಸುವುದಾಗಿ ನಂಬಿಸಿ ಶಿಕ್ಷಕ ಅಲ್ತಾಫ್, ಬಾಲಕನನ್ನು ಹಳೆ ಮೀನು ಮಾರುಕಟ್ಟೆ ಸಮೀಪವಿದ್ದ ತನ್ನ ಕೊಠಡಿಗೆ ಕರೆಸಿಕೊಂಡಿದ್ದನು. ಅಲ್ಲಿ ಬಾಲಕನಿಗೆ ಮಾದಕ ದ್ರವ್ಯ ಬೆರೆಸಿದ ಜ್ಯೂಸ್ ನೀಡಿ ಅರೆಪ್ರಜ್ಞಾವಸ್ಥೆಗೆ ತಲುಪಿಸಿ, ಆತನ ನಗ್ನ ವಿಡಿಯೋ ಚಿತ್ರೀಕರಿಸಿದ್ದನು.

ನಂತರ ಆ ವಿಡಿಯೋ ತೋರಿಸಿ ಬೆದರಿಕೆ ಹಾಕಿದ ಆರೋಪಿಯು, ವಿಷಯ ಯಾರಿಗಾದರೂ ತಿಳಿಸಿದರೆ ಪರೀಕ್ಷೆ ಬರೆಯಲು ಬಿಡುವುದಿಲ್ಲ ಮತ್ತು ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದನು. ಅಷ್ಟೇ ಅಲ್ಲದೆ, ಬಾಲಕನ ಮೇಲೆ ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದು, ವಿರೋಧಿಸಿದಾಗ ಬೆಲ್ಟ್‌ನಿಂದ ಹಲ್ಲೆ ನಡೆಸಿರುವುದು ವರದಿಯಾಗಿದೆ.

ಕಳೆದ ಕೆಲವು ದಿನಗಳಿಂದ ಬಾಲಕನ ಆರೋಗ್ಯದಲ್ಲಿ ಏರುಪೇರಾದಾಗ ಅನುಮಾನಗೊಂಡ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಮತ್ತು ಪೋಷಕರ ವಿಚಾರಣೆ ವೇಳೆ ಬಾಲಕನು ನಡೆದ ಘಟನೆಯನ್ನು ವಿವರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 377, 324, 506 ಮತ್ತು ಫೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article