ಶಕ್ತಿ ವಿದ್ಯಾಸಂಸ್ಥೆಯಲ್ಲಿ ಜ್ಯೋತಿ ಪ್ರಧಾನ ಹಾಗೂ ಬೀಳ್ಕೊಡುಗೆ ಸಮಾರಂಭ

ಶಕ್ತಿ ವಿದ್ಯಾಸಂಸ್ಥೆಯಲ್ಲಿ ಜ್ಯೋತಿ ಪ್ರಧಾನ ಹಾಗೂ ಬೀಳ್ಕೊಡುಗೆ ಸಮಾರಂಭ


ಮಂಗಳೂರು: ಮಂಗಳೂರಿನ ಶಕ್ತಿ ವಿದ್ಯಾಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಗೆ ಬೀಳ್ಕೊಡುಗೆ ಸಮಾರಂಭ 20025-26 ವಿಜೃಂಭಣೆಯಿಂದ ನಡೆಯಿತು.


ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ, ಇದು ಬೀಳ್ಕೊಡುಗೆ ಸಮಾರಂಭ ಅಷ್ಟೆ ಅಲ್ಲ ಅದಕ್ಕಿಂತ ಹೆಚ್ಚಾಗಿ ನಮ್ಮ ಶಕ್ತಿ ಪಿಯು ಕಾಲೇಜ್‌ಗೆ ನಿಮ್ಮನ್ನೆಲ್ಲ ಸ್ವಾಗತಿಸುವ ಕಾರ್ಯಕ್ರಮವಾಗಿದೆ. ಸಮಾಜದಲ್ಲಿ ಎತ್ತರದ ಸ್ಥಾನಕ್ಕೆ ನೀವೆಲ್ಲ ಏರಬೇಕು, ಆ ಮೂಲಕ ನೀವು ಕಲಿತ ಈ ಶಕ್ತಿ ಶಾಲೆಗೆ, ಸಮಾಜಕ್ಕೆ ನೀವೆಲ್ಲ ಕೊಡುಗೆ ನೀಡುವಂತಾಗಬೇಕು ಎಂದು ಹೇಳಿದರು.


ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಕಲಿಸಿಕೊಟ್ಟ ಎಲ್ಲಾ ಸಂಸ್ಕಾರಗಳನ್ನು ಜೀವನದಲ್ಲಿ ರೂಢಿಸಿಕೊಂಡು ಸಮಾಜದಲ್ಲಿ ನೀವು ಕಲಿತ ಶಾಲೆಗೆ ಶಿಕ್ಷಕರಿಗೆ ಮತ್ತು ನಿಮ್ಮ ತಂದೆ ತಾಯಿಯರಿಗೆ ಗೌರವ ತರುವಂತೆ ಬದುಕಿ. ನೀವು ತಪ್ಪು ಮಾಡಿದಾಗ ಗುರುಗಳು ನೀವು ಉತ್ತಮ ವಿದ್ಯಾರ್ಥಿಯಾಗಿ ರೂಪುಗೊಳ್ಳಲು ನಿಮಗೆ ಗದರಿರುತ್ತಾರೆ, ದಂಡಿಸಿರುತ್ತಾರೆ. ಅದನ್ನು ಧನಾತ್ಮಕವಾಗಿ ಸ್ವೀಕರಿಸಿ ಜೀವನದಲ್ಲಿ ಸಾಧನೆ ಮಾಡಿ ಮುಂಬರುವ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳನ್ನು ಗಳಿಸಿ ಎಂದು ಶುಭ ಹಾರೈಸಿದರು.


ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್‌ಮೂರ್ತಿ ಹೆಚ್. ಮಾತನಾಡಿ, ವಿದ್ಯಾರ್ಥಿಗಳಿಗೆ ಸಿಂಹದ ಹಸಿವು, ಹದ್ದಿನ ತೀಕ್ಷಣತೆ ಇರಬೇಕು. ನೀವು ಓದುವ ವಿಚಾರದಲ್ಲಿ, ಜೀವನದಲ್ಲಿ ಸಾಧನೆಯ ಹಾದಿಯಲ್ಲಿ ಎಷ್ಟು ಪರಿಶ್ರಮವನ್ನು ಹಾಕುತ್ತಿರೋ ಅಷ್ಟೆ ಪ್ರತಿಫಲ ನಿಮಗೆ ಸಿಗುತ್ತೆ. ಸತತ ಪ್ರಯತ್ನ ಇದ್ದರೆ ಯಶಸ್ಸು ನಿಮ್ಮದಾಗುತ್ತೆ. ನಮ್ಮ ಜೀವನದಲ್ಲಿ ನಮ್ಮಿಂದ ಆಗುವ ತಪ್ಪುಗಳನ್ನು ಮೊದಲು ನಾವು ಸರಿಪಡಿಸಿಕೊಳ್ಬೇಕು. ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ಆಗು ಹೋಗುಗಗಳನ್ನು ನೀವು ಕಲಿಯಬೇಕು. ಶಕ್ತಿ ಪಿಯು ಕಾಲೇಜ್ ನಿಮ್ಮನ್ನೆಲ್ಲ ಸ್ವಾಗತಿಸುತ್ತದೆ. ನಿಮ್ಮ 10ನೇ ತರಗತಿಯ ಪರೀಕ್ಷೆಗೆ ಶುಭವಾಗಲಿ ಉತ್ತಮ ಅಂಕಗಳನ್ನು ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.


ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್ ಮಾತನಾಡಿ, ಮಕ್ಕಳ ಸವಾಂಗೀಣ ಪ್ರಗತಿಗೆ ಬೇಕಾದ ಸಕಲ ಸೌಲಭ್ಯವನ್ನು ಆಡಳಿತ ಮಂಡಳಿ ನೀಡುತ್ತಿದೆ. ಈ ಶಕ್ತಿ ವಿದ್ಯಾ ಸಂಸ್ಥೆಯನ್ನು ಕಟ್ಟಿದ ಮುಖ್ಯ ಉದ್ದೇಶ ಇಲ್ಲಿ ವ್ಯಾಸಂಗ ಮಾಡುವ ಮಕ್ಕಳು ದೇಶದ ಸಂಪತ್ತಾಗಬೇಕು. ನಿಮ್ಮ ಭವಿಷ್ಯದ ಜೀವನ ಸಂತೋಷಧಾಯಕವಾಗಿರಲಿ ಎಂದು ಮಕ್ಕಳಿಗೆ ಶುಭಹಾರೈಸಿದರು.


ಶಿಕ್ಷಕರಾದ ಶರಣಪ್ಪ ಮತ್ತು ಸ್ಮಿತಾ ಮುಂಬರುವ ಬೋರ್ಡ್ ಪರೀಕ್ಷೆಗೆ ಶುಭ ಹಾರೈಸುವ ಮೂಲಕ ಮಕ್ಕಳಿಗೆ ಹಿತನುಡಿಗಳನ್ನಾಡಿದರು.


ವಿದ್ಯಾರ್ಥಿಗಳಾದ ನಯನ್ ಮತ್ತು ಮಾಹಿ ತಮ್ಮ ಶಾಲಾ ದಿನಗಳ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. 9ನೇ ತರಗತಿಯ ವಿದ್ಯಾರ್ಥಿಗಳು ವಿವಿಧ ಮನರಂಜನ ಕಾರ್ಯಕ್ರಮ ಮತ್ತು ಸ್ವರ್ಧೆಗಳನ್ನು ಏರ್ಪಡಿಸಿದರು. 


ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಬಬಿತಾ ಸೂರಜ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು. ಮಕ್ಕಳಿಗೆ ಸಂಸ್ಥಾಪಕ ಕೆಸಿ ನಾಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಹೆಚ್. ಹಾಗೂ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ 10ನೇ ತರಗತಿ ಮಕ್ಕಳಿಗೆ ಜ್ಯೋತಿ ಪ್ರಧಾನ ಮಾಡಿದರು. 


ಈ ಸಂದರ್ಭದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಶಿಕ್ಷಕಿ ಶ್ವೇತ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article