ಕಟ್ಟಡ ಕಾಮಿ೯ಕರಿಗೆ ಕಾನೂನು ಮಾಹಿತಿ ಮತ್ತು ತಾಲೂಕು ಸಮಾವೇಶ

ಕಟ್ಟಡ ಕಾಮಿ೯ಕರಿಗೆ ಕಾನೂನು ಮಾಹಿತಿ ಮತ್ತು ತಾಲೂಕು ಸಮಾವೇಶ


ಮೂಡುಬಿದಿರೆ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಮೂಡುಬಿದಿರೆ ತಾಲೂಕು ಸಮಿತಿ ಕಟ್ಟಡ ಮತ್ತು ಕಟ್ಟಡ ನಿಮಾ೯ಣ ಕಾರ್ಮಿಕರಿಗೆ ಕಾನೂನು ಮಾಹಿತಿ ಹಾಗೂ ತಾಲೂಕು ಮಟ್ಟದ ಸಮಾವೇಶವು ಸಮಾಜ ಮಂದಿರದಲ್ಲಿ ಸೋಮವಾರ ನಡೆಯಿತು.

ಮಂಗಳೂರಿನ ಕಾರ್ಮಿಕ ಅಧಿಕಾರಿ ಬಿ.ಆರ್. ಕುಮಾರ್ ಮಾಹಿತಿ ನೀಡಿ ಮಾತನಾಡಿ, ಗ್ರಾಮ ಪಂಚಾಯತ್ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಮನೆ, ಕಟ್ಟಡ ಮತ್ತು ನಿರ್ಮಾಣ ರಂಗಗಳಿಗೆ ಪರವಾನಿಗೆ ನೀಡುವಾಗ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸಂಗ್ರಹಿಸಬೇಕಾದ ಸೆಸ್ಸ್ ನ್ನು ಸಮರ್ಪಕವಾಗಿ ನಿರ್ವಹಿಸಬೇಕು ಮತ್ತು ಕಟ್ಟಡ ಕಾರ್ಮಿಕರು ಕೂಡಾ ನಿಗಾ ವಹಿಸಬೇಕು ಎಂದು ಹೇಳಿದರು.


ಸಂಹಿತೆಯಾಗಿ ಬದಲಾದ ನಂತರದ ವಿದ್ಯಮಾನಗಳನ್ನು ವಿವರಿಸುತ್ತಾ ಕಾರ್ಮಿಕರು ಕ್ರಮಬದ್ಧವಾಗಿ ಸವಲತ್ತುಗಳನ್ನು ಪಡೆಯಲು ದಾಖಲೆ ಪತ್ರಗಳನ್ನು ಸಮರ್ಪಕವಾಗಿಟ್ಟುಕೊಳ್ಳಬೇಕೆಂದು ಎನ್ನುತ್ತಾ ಕಾನೂನುಬದ್ಧ ಸವಲತ್ತುಗಳ ವಿವರಿಸಿದರು.

ಸಮಾವೇಶದ ಅಧ್ಯಕ್ಷತೆಯನ್ನು ಕೃಷ್ಣಪ್ಪ ಪೂಜಾರಿ ಅವರು ವಹಿಸಿದ್ದರು.

ಕಾಮಿ೯ಕ ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಯಾದವ ಶೆಟ್ಟಿ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ, ಮುಂದಾಳುಗಳಾದ ರಮಣಿ, ರಾಧಾ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಶಂಕರ್ ಸ್ವಾಗತಿಸಿ, ಸದಾನಂದ ಮಾರ್ನಾಡ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article