ಟವರ್ ನಿರ್ಮಾಣಕ್ಕೆ ಮುಂದಾದ ಯುಕೆಟಿಎಲ್ ಕಂಪನಿ: ಪ್ರತಿಭಟನೆ

ಟವರ್ ನಿರ್ಮಾಣಕ್ಕೆ ಮುಂದಾದ ಯುಕೆಟಿಎಲ್ ಕಂಪನಿ: ಪ್ರತಿಭಟನೆ


ಮೂಡುಬಿದಿರೆ: ತೆಂಕ ಮಿಜಾರು ಗ್ರಾಮದ ಪಡೀಲು ಎಂಬಲ್ಲಿ ಯುಕೆಟಿಎಲ್ ಕಂಪನಿಯವರು ರೈತರಿಗೆ ಸಂಪೂರ್ಣ ಪರಿಹಾರದ ಮೊತ್ತ ಪಾವತಿಸದೆ ಟವರ್ ನಿರ್ಮಾಣ ಕಾರ್ಯ ಮಾಡಲು ಬಂದ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಸ್ಥಳೀಯ ಕಿಸಾನ್ ಕರೆ ಸಮಿತಿಯ ಅಧ್ಯಕ್ಷ ಪ್ರವೀಣ್ ರೈ,ಪಂಚಾಯತ್ ಸದಸ್ಯರಾದ ಹರಿಪ್ರಸಾದ್ ರೈ, ನೇಮಿರಾಜ ಹಾಗೂ ಮತ್ತಿತರ ಪ್ರಮುಖರು ಸೇರಿ ಪ್ರತಿಭಟನೆಯನ್ನು ನಡೆಸಿದರು.


ರೈತರಿಗೆ ಪರಿಹಾರ ಸಿಗದೇ ಯಾವುದೇ ಕಾರಣಕ್ಕೂ ಕೆಲಸ ಮಾಡಲು ಬಿಡುವುದಿಲ್ಲ ಎಂದು ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಶಾಂತಿ ಪ್ರಸಾದ್ ಹೆಗ್ಡೆ ತಿಳಿಸಿ, ಯುಕೆಟಿಎಲ್ ಕಂಪನಿಯ ಕೆಲಸಗಾರರನ್ನು ಅವರ ಸ್ವತ್ತುಗಳ ಸಮೇತ ವಾಪಸ್ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಪರಿಹಾರ ನೀಡದೇ ಕಾನೂನುಬಾಹಿರವಾಗಿ, ಬಲಾತ್ಕಾರದಿಂದ ಅವರ ಜಾಗವನ್ನು ಪ್ರವೇಶಿಸಿದಲ್ಲಿ ಹೋರಾಟವನ್ನು ನಡೆಸುತ್ತೇವೆಂಬ ಎಚ್ಚರಿಕೆಯನ್ನು ಕಂಪನಿಯ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಶಾಂತಿ ಪ್ರಸಾದ್ ಹೆಗ್ಡೆ ನೀಡಿದರು.

ರೈತರು ನಡೆಸುತ್ತಿದ್ದ ಪ್ರತಿಭಟನಾ ಸಂದರ್ಭದಲ್ಲಿ ಮೂಡಬಿದ್ರೆ ಪೊಲೀಸರು ಆಗಮಿಸಿದ್ದು ರೈತರು, ಕಂಪನಿಯವರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ರೈತರ ಪ್ರತಿಭಟನೆಗೆ ಮಣಿದು ತಮ್ಮ ಸರಕು ಸಾಮಗ್ರಿಗಳೊಂದಿಗೆ ಕಂಪೆನಿಯವರು ವಾಪಸು ತೆರಳಿದ್ದಾರೆ. ಇದು ರೈತರಿಗೆ ಸಂದ ಗೆಲುವಾಗಿದೆ.

ಈ ಸಂದರ್ಭದಲ್ಲಿ ಪ್ರವೀಣ್ ಭಂಡಾರಿ, ಶಿವಕುಮಾರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article