ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕಯ್ಯಾರು ಪ್ರಭಾಕರ ರೈ ನಿಧನ

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕಯ್ಯಾರು ಪ್ರಭಾಕರ ರೈ ನಿಧನ


ಮೂಡುಬಿದಿರೆ: ಇಲ್ಲಿನ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆಯ ನಿವೃತ್ತ  ದೈಹಿಕ ಶಿಕ್ಷಣ ಶಿಕ್ಷಕ (PET) ಕಯ್ಯಾರು ಪ್ರಭಾಕರ ರೈ ಅವರು (85)  ಮಂಗಳವಾರ ನಿಧನರಾದರು. ಮೃತರು ಪತ್ನಿ ಹಾಗೂ ಬ್ಯಾಂಕ್ ಆಫ್ ಬರೋಡಾ (ವಿಜಯಾ ಬ್ಯಾಂಕ್) ನ ಹಿರಿಯ ವ್ಯವಸ್ಥಾಪಕ ಮಧುಸೂಧನ ರೈ ಸಹಿತ ಈರ್ವರು ಪುತ್ರರನ್ನು ಅಗಲಿರುತ್ತಾರೆ. 

ಬೆಂಗಳೂರಿನ ಗುಜರಾತಿ ವಿದ್ಯಾಲಯದಲ್ಲಿ ಆರಂಭಿಕ ವೃತ್ತಿ ಜೀವನ ನಡೆಸಿದ ಇವರು ಮುಂದೆ ಬೆಳುವಾಯಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆಯ ಸಮುದಾಯ ಕ್ರೀಡಾಂಗಣ, ರಜತ ಮಹೋತ್ಸವದ ಸಂದರ್ಭ ಸಕ್ರೀಯ ಸೇವೆ ಸಲ್ಲಿಸುವುದರೊಂದಿಗೆ ಶಾಲಾ ಸಿಬ್ಬಂದಿ ವೃಂದ, ವಿದ್ಯಾರ್ಥಿ ವೃಂದ ಹಾಗೂ ಸಮುದಾಯದಲ್ಲಿ ಆತ್ಮೀಯ ಒಡನಾಟ ಹೊಂದಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article