ವಿಡಿಯೋ-ಸೆನ್ಸಾರ್ ತಂತ್ರಜ್ಞಾನ: ಕ್ಷಣದೊಳಗೆ ಫಲಿತಾಂಶ-ಕ್ರೀಡಾಕೂಟದ ಅಂತರರಾಷ್ಟ್ರೀಯ ಗುಣಮಟ್ಟ: ಆಳ್ವರೇ ಸಾಟಿ
ಹೀಗೆ ಸೂಕ್ಷ್ಮದೊಳಗಿನ ಅತಿಸೂಕ್ಷ್ಮ ನಿಖರತೆ, ಅಂತರರಾಷ್ಟ್ರೀಯ ಮಾನದಂಡ ದೃಢೀಕರಿತ ಗುಣಮಟ್ಟ, ಮೂಲ ಸೌಕರ್ಯ, ಪಾರದರ್ಶಕತೆಗಳನ್ನೆಲ್ಲ ನೀವು ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆತಿಥ್ಯದಲ್ಲಿ ನಡೆಯುತ್ತಿರುವ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ ಕ್ರೀಡಾಕೂಟದಲ್ಲಿ ಕಾಣಬಹುದು.
ಎಲ್ಲ ಕ್ರೀಡೆಗೂ ‘ಸ್ಪೆಸಿಫಿಕೇಶನ್ ಆಫ್ ವರ್ಲ್ಡ್ ಅಥ್ಲೆಟಿಕ್ಸ್’ ಪ್ರಮಾಣೀಕೃತ ಸಲಕರಣೆಗಳನ್ನೇ ಬಳಸಲಾಗುತ್ತಿದೆ. ಪ್ರತಿ ಕ್ರೀಡೆಗೂ ನಿಯೋಜಿತ ಮತ್ತು ಪ್ರಾಮಾಣೀಕೃತ ಸಲಕರಣೆಗಳ ಬಳಕೆ. ಅಷ್ಟು ಮಾತ್ರವಲ್ಲ, ವಿಶ್ರಾಂತಿ ಕೊಠಡಿ, ಮಾಧ್ಯಮ ಕೊಠಡಿ, ವೈದ್ಯಕೀಯ ಕೊಠಡಿ, ಫಿಸಿಯೋ ಥೆರಪಿ, ಮಿಕ್ಸೆಡ್ ವಲಯ, ತಾಂತ್ರಿಕ ಕೊಠಡಿ, ಉಡುಪು ಕೊಠಡಿ ಸೇರಿದಂತೆ ಮೂಲಸೌಕರ್ಯಗಳೆಲ್ಲವೂ ಅಂತರರಾಷ್ಟ್ರೀಯ ಮಾನದಂಡದ ಮಾದರಿ.
ರಾಷ್ಟ್ರೀಯ ಕ್ರೀಡಾಕೂಟವೊಂದನ್ನು ಆಯೋಜಿಸಲು ವಿಶ್ವ ಅಥ್ಲೆಟಿಕ್ಸ್ ಒಕ್ಕೂಟ (ಡಬ್ಲೂö್ಯಎಎಫ್)ಪ್ರಮಾಣೀಕೃತ, ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ (ಐಎಎಫ್) ದ ಮಾನ್ಯತೆ ನೀಡುವ ಗುಣಮಟ್ಟ ಇರಲೇಬೇಕು. ಆದರೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರ ನೇತೃತ್ವದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ‘ಮೂಡುಬಿದಿರೆಯ ಈ ಕ್ರೀಡಾಕೂಟ’ವು ಗುಣಮಟ್ಟ ಮಾತ್ರವಲ್ಲ ಸೌಕರ್ಯ, ಸೌಲಭ್ಯ, ವ್ಯವಸ್ಥೆಗಳನ್ನೆಲ್ಲಿ ಕ್ರೀಡೆಕೇಂದ್ರಿತವಾಗಿ ರಾಜಿ ಇಲ್ಲದ ಅಂತರರಾಷ್ಟಿçÃಯ ಮಾನದಂಡಕ್ಕೆ ಅನುಗುಣವಾಗಿ ಹಮ್ಮಿಕೊಂಡಿದೆ.
ಸಂಪೂರ್ಣ ಕ್ರೀಡೆಯ ಉಸ್ತುವಾರಿಯನ್ನು ಒಲಿಂಪಿಕ್ ಅರ್ಹತೆಯ ವೀಕ್ಷಕರು ಪರಿಶೀಲಿಸುತ್ತಿದ್ದರೆ, ಡಬ್ಲೂö್ಯಎಎಫ್ ಪರೀಕ್ಷೆಗಳನ್ನು ತೇರ್ಗಡೆ ಹೊಂದಿದ ಐಎಎಫ್‌ಯ ಸುಮಾರು 20ನಿರ್ಣಾಯಕರು ಗುಣಮಟ್ಟ ನಿರ್ದೇಶಿಸಿದರೆ, ರಾಷ್ಟ್ರೀಯ ಮಾನ್ಯತೆ ಪಡೆದ 150ಕ್ಕೂ ಅಧಿಕ ದೇಶದ ಸರ್ವಶ್ರೇಷ್ಠ ಅಥ್ಲೀಟ್ ತೀರ್ಪುಗಾರರು ಫಲಿತಾಂಶ ನಿರ್ವಹಿಸುತ್ತಿದ್ದಾರೆ. ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕರ ದೊಡ್ಡ ತಂಡವಿದೆ. ಅವರಿಗೆ ಬೆಂಬಲವಾಗಿ ಅಂಕಣದ ಕ್ಷಣ ಕ್ಷಣದ ನಿರ್ವಹಣೆಯನ್ನು ಮಾಡಲು ಆಳ್ವಾಸ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಕ್ರೀಡಾವಿದ್ಯಾರ್ಥಿಗಳ ಜೊತೆ ದೊಡ್ಡ ಸಂಖ್ಯೆಯ ಕ್ರೀಡಾ ನಿರ್ದಿಷ್ಟ ಸ್ವಯಂ ಸೇವಕರ ತಂಡವಿದೆ. ಹೀಗೆ ಹಂತ ಹಂತಗಳು ಸೇರಿದಂತೆ ಸ್ವಯಂಸೇವಕರ ತಂಡವೇ ಸಾವಿರಕ್ಕೂ ಅಧಿಕ ಇದೆ. ವಿಶೇಷ ಹೊನಲು ಬೆಳಕಿನ ವ್ಯವಸ್ಥೆಯ ವಿವರವು ಇನ್ನೊಂದು ಅಧ್ಯಾಯ.
ಇದು ಕೇವಲ ಕ್ರೀಡಾಂಗಣದೊಳಗಿನ ಕಿರುವಿವರ. ಇನ್ನು ಆಹಾರ, ವಸತಿ, ಪ್ರಯಾಣ, ವೇದಿಕೆ, ಸ್ವಾಗತ, ಸ್ವಚ್ಛತೆ, ಸೌಂದರ್ಯ, ನಿರ್ವಹಣೆ ಸೇರಿದಂತೆ ದೊಡ್ಡ ಬಳಗವೇ ಕ್ರೀಡಾ ಕಾರ್ಯನಿರ್ವಹಿಸುತ್ತಿದೆ.
‘ಅಂತರರಾಷ್ಟ್ರೀಯ ಗುಣಮಟ್ಟದ ವ್ಯವಸ್ಥೆಗಳ ಜೊತೆ ಡಾ.ಎಂ. ಮೋಹನ ಆಳ್ವ ಅವರ ಮನಪೂರ್ವಕ ಅಸ್ಥೆಯಿಂದಾಗಿ ಕ್ರೀಡಾಪಟುವಿಗೆ ಸಂಪೂರ್ಣ ಉಚಿತ ವಸತಿ, ಊಟ, ವಿಶ್ರಾಂತಿ, ಪಿಕ್‌ಅಪ್ ಡ್ರಾಪ್, ನಗದು ಬಹುಮಾನ ಮತ್ತಿತರ ವಿಶೇಷ ವ್ಯವಸ್ಥೆಮಾಡಲಾಗಿದೆ. ಕ್ರೀಡಾಂಗಣದ ಪರಿಪಕ್ವತೆಗೆ ಕನಿಷ್ಠ ನೂರಕ್ಕೂ ಹೆಚ್ಚು ದಿನದ ಹಗಲಿರುಳು ಸಿದ್ಧತೆ ನಡೆದಿದೆ.
ಗುಣಮಟ್ಟ ಮತ್ತು ನಿಖರತೆಯಲ್ಲಿ ಆಳ್ವರಿಗೆ ಆಳ್ವರೇ ಸಾಟಿ. ಅನುಭವವೇ ಅನನ್ಯ’ ಎಂದು ಪ್ರಮುಖ ನಿರ್ಣಾಯಕರುಗಳು ಶ್ಲಾಘಿಸಿದರು.
ಕ್ರೀಡೆ ಎಂದರೆ ಕೇವಲ ಸ್ಪರ್ಧೆಯಲ್ಲ; ಅಲ್ಲಿ ನಿಖರತೆ, ಪಾರದರ್ಶಕತೆಗೆ ಹೆಚ್ಚಿನ ಪ್ರಾಶಸ್ತ್ಯ ವಿಶ್ವ ಅಥ್ಲೆಟಿಕ್ಸ್ ಮಾನದಂಡಗಳಿಗೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನ, ಗುಣಮಟ್ಟದ ಮೂಲಸೌಕರ್ಯ ಹಾಗೂ ಕ್ರೀಡಾಪಟು ಕೇಂದ್ರಿತ ವ್ಯವಸ್ಥೆಗಳನ್ನು ಒದಗಿಸುವುದು ಆಯೋಜಕರ ಜವಾಬ್ದಾರಿ. ಭಾಗವಹಿಸುವ ಪ್ರತೀ ಅಥ್ಲೀಟ್‌ಗೆ ಅಂತರರಾಷ್ಟ್ರೀಯ ಮಟ್ಟದ ಅನುಭವ ಮೂಡಬೇಕು ಎಂಬುದರ ಹಿನ್ನಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. -ಡಾ. ಎಂ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ
ಕ್ರೀಡಾಕೂಟ ವ್ಯವಸ್ಥೆ ಎಲ್ಲವೂ ಉತ್ತಮವಾಗಿದೆ. ನಮಗೆ ಬಹಳ ಖುಷಿಯಾಗಿದೆ
-ಪ್ರಿಯಾ ಠಾಕೂರ್, ಚಂಡೀಗಢ ವಿಶ್ವವಿದ್ಯಾಲಯ (ಚಿನ್ನದ ಪದಕ ವಿಜೇತೆ)
ಉತ್ತಮ ವ್ಯವಸ್ಥೆ ಮಾಡಿದ್ದಾರೆ. ಮಾದರಿಯಾಗಿದೆ.
-ಅಜಯ್ ಡಿ, ಚೆನ್ನೈನ ಮದ್ರಾಸ್ ವಿ.ವಿ. (ಚಿನ್ನದ ಪದಕ ವಿಜೇತ)
