ಇರುವೈಲು: ಅಂಚೆ ಕಛೇರಿ ಸ್ಥಳಾಂತರ
Thursday, January 15, 2026
ಮೂಡುಬಿದಿರೆ: ಇರುವೈಲು ಗ್ರಾಮದ ದಂಬೆಕೋಡಿ ವ್ಯಾಪ್ತಿಯಲ್ಲಿ ಕಾಯ೯ನಿವ೯ಹಿಸುತ್ತಿದ್ದ ಅಂಚೆ ಕಛೇರಿಯನ್ನು ದೇವಸ್ಥಾನದ ಮುಂಭಾಗದಲ್ಲಿರುವ ಪೂವಪ್ಪ ಸಾಲ್ಯಾನ್ ಮಾಲಕತ್ವದ ಕಟ್ಟಡಕ್ಕೆ ಗುರುವಾರ ಸ್ಥಳಾಂತರಗೊಳಿಸಲಾಗಿದೆ.
ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ಟ, ಅಂಚೆ ಮೇಲ್ವಿಚಾರಕ ಪದ್ಮನಾಭ ಪೂಜಾರಿ, ಮಾರುಕಟ್ಟೆ ಕಾರ್ಯನಿರ್ವಾಹಕ ಸುಭಾಷ್ ಪಿ ಸಾಲ್ಯಾನ್, ಬ್ರಾಂಚ್ ಪೋಸ್ಟ್ ಮಾಸ್ಟರ್ ಲಿಖಿತ, ಪೋಸ್ಟ್ ಮ್ಯಾನ್ ಸಿದ್ದಾರೂಢ, ಪ್ರಶಾಂತ ಆಚಾರ್ಯ, ದೀಪ ದಿನೇಶ್, ಪ್ರಮೀಳಾ ದೇವರಗುಡ್ಡೆ ಈ ಸಂದರ್ಭದಲ್ಲಿದ್ದರು.