ತೆಂಕಮಿಜಾರು ಗ್ರಾ.ಪಂ. ಮಾಜಿ ಅಧ್ಯಕ್ಷ ವರ್ಕು ಶಂಕರ ರಾವ್ ನಿಧನ

ತೆಂಕಮಿಜಾರು ಗ್ರಾ.ಪಂ. ಮಾಜಿ ಅಧ್ಯಕ್ಷ ವರ್ಕು ಶಂಕರ ರಾವ್ ನಿಧನ


ಮೂಡುಬಿದಿರೆ: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಸಮಿತಿ ಮಾಜಿ ಸದಸ್ಯ, ಮಂಜನಬೈಲು ಶ್ರೀ ಭವಾನಿಶಂಕರ ಭಜನಾ ಮಂಡಳಿ ಅಧ್ಯಕ್ಷ, ತೆಂಕಮಿಜಾರು ಗ್ರಾ.ಪಂ. ಮಾಜಿ ಅಧ್ಯಕ್ಷ ವರ್ಕು ಶಂಕರ ರಾವ್ ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು ಧಾರ್ಮಿಕ, ಸಾಮಾಜಿಕ, ಸಹಕಾರ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಕಲ್ಲಮುಂಡ್ಕೂರು ಮಂಡಲ ಪಂಚಾಯತ್ ಸದಸ್ಯ, ಕಲಾನಿಧಿ ಸಹಕಾರ ಸಂಘದ ನಿರ್ದೇಶಕ, ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರ ಸಂಘದ ನಾಮನಿರ್ದೇಶಿತ ಸದಸ್ಯರಾಗಿದ್ದರು. ಭಜನಾ ಕಲಾವಿದರಾಗಿ ಜನಮೆಚ್ಚುಗೆ ಪಡೆದಿದ್ದ ಅವರ ಭಜನೆಗಳ ಪ್ರಸ್ತುತಿ ಆಪ್ಯಾಯಮಾನವಾಗಿತ್ತು.

ಮೃತರಿಗೆ ಮೂವರು ಗಂಡು ಹಾಗೂ ಒಬ್ಬಾಕೆ ಪುತ್ರಿ ಇದ್ದಾರೆ.

ಸಂತಾಪ

ವರ್ಕು ಶಂಕರ ರಾವ್ ನಿಧನಕ್ಕೆ ಮಾಜಿ ಸಚಿವ ಅಭಯಚಂದ್ರ ಜೈನ್, ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಮೂರ್ತಿ ವಿ.ಎ., ಮಂಜನಬೈಲು ಶ್ರೀ ಭವಾನಿ ಶಂಕರ ಭಜನಾ ಮಂಡಳಿ ಕಾರ್ಯದರ್ಶಿ ಬಾಲಕೃಷ್ಣ ರಾವ್, ಅಶ್ವತ್ಥಪುರ ‌ಕಲಾನಿಧಿ ಸಹಕಾರ ಸಂಘದ ಅಧ್ಯಕ್ಷ ರಘುನಾಥ ಎಲ್.ವಿ. ಮೊದಲಾದವರು ಸಂತಾಪ ಸೂಚಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article