ಎಕ್ಸಲೆಂಟ್ ಸಿಬಿಎಸ್ಸಿ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ಎಕ್ಸಲೆಂಟ್ ಸಿಬಿಎಸ್ಸಿ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ


ಮೂಡುಬಿದಿರೆ: ಎಕ್ಸಲೆಂಟ್ ಸಿಬಿಎಸ್‌ಇ ಶಾಲೆ ಮೂಡುಬಿದಿರೆಯ ಅವರಣದಲ್ಲಿ ಇಂದು 77ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

'ಭಾರತದ ಸಂವಿಧಾನವು ಭಾರತದ ಪರಮೋಚ್ಛ ಕಾನೂನು ನಾವು ಸನಾ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ತತ್ಪಗಳನ್ನು ಗೌರವಿಸಿ ಪಾಲಿಸಬೇಕು'' ಎಂದು ಗೌರವಾನ್ವಿತ ಅತಿಥಿಗಳಾದ ಡಾ. ದಯಾನಂದ (ಜೆಇಇ ಮತ್ತು ನೀಟ್ ಕೆಮಿಸ್ಟ್ರಿ ಡೀನ್) ಎಕ್ಸಲೆಂಟ್ ಪ್ರಿಯು ಕಾಲೇಜ್ ಮೂಡಬಿದಿರೆಯವರು ಆಶಯವನ್ನು ಅಭಿವ್ಯಕ್ತಪಡಿಸಿದರು. 

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದ ಇನ್ನೋರ್ವ ಅತಿಥಿ ಎಕ್ಸಲೆಂಟ್ ಪಿಯು ಕಾಲೇಜ್ ಉಪ ಪ್ರಾಂಶುಪಾಲ ತೇಜಸ್ವಿ ಭಟ್ ಅವರು, "ಒಂದೇ ಧ್ವಜದಡಿ ನಿಂತಿರುವ ನಾವಲ್ಯ ರೂ ಸಮಾನರು ಸಮಾಜವನ್ನು ಕಟ್ಟುವಲಿ. ನಾವು ಶ್ರಮಿಸಬೇಕು, ಇಂದು ನಮ್ಮ ಹಕ್ಕು ಮತ್ತು ಕರ್ತವ್ಯವನ್ನು ನೆನಪಿಸಿಕೊಳ್ಳುವ ದಿನವಾಗಿದೆ'' ಎಂದು ತಿಳಿಸಿದರು. 

ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಸಿಬಿಎಸ್‌ಇ ಶಾಲೆ ಪ್ರಾಂಶುಪಾಲ ಪ್ರಸಾದ್, ಸಿಬಿಎಸ್‌ ಇ ಸಂಯೋಜಕಿ ವಿಮಲ ಶಾಲಾ ನಾಯಕ ಶ್ರೀಕರ್ ಮತ್ತು ಶಿಕ್ಷಕ ಶಿಕ್ಷಕೇತರ ವರ್ಗ ಮತ್ತು ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ವಿದ್ಯಾರ್ಥಿ ಹರ್ಷ್ ಸ್ವಾಗತಿಸಿ, ವಿದ್ಯಾರ್ಥಿನ ಪೂರ್ವಿ ವಂದಿಸಿ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article