ಬೆಳುವಾಯಿ ಗ್ರಾ.ಪಂ.ಗೆ ಎಂಎಲ್ಸಿ ಕಿಶೋರ್ ಕುಮಾರ್ ಭೇಟಿ
ಗ್ರಾಮ ಪಂಚಾಯತ್ ಗಳು ಪ್ರಸ್ತುತ ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಗಳಾದ ನಿವೇಶನದ ವಿನ್ಯಾಸ ಅನುಮೋದನೆ,ನಮೂನೆ 11ಎ,ನಮೂನೆ 11-B, ಸ್ವಾಧೀನ ಪ್ರಮಾಣ ಪತ್ರ, ವಿವಿಧ ವಸತಿ ಯೋಜನೆಯಡಿಯಲ್ಲಿ ವಿತರಿಸಲಾದ ಮನೆಗಳಿಗೆ ಕದ ನಂಬ್ರ ನೀಡಲು ಇರುವ ತೊಂದರೆಗಳ ಬಗ್ಗೆ ಹಾಜರಿದ್ದ ಸದಸ್ಯರು ತಿಳಿಸಿದರು.
ಪಂಚಾಯತ್ ರಾಜ್ ವಿಷಯಗಳಾದ ಕಟ್ಟಡ ಮತ್ತು ಭೂ ತೆರಿಗೆ ಸಂಗ್ರಹಣೆ,ವಾರ್ಡ್ ಮತ್ತು ಗ್ರಾಮ ಸಭೆ,ಗ್ರಾಮ ಪಂಚಾಯತ್ ಅಭಿವೃದ್ಧಿಯಲ್ಲಿ ಇರುವ ಅಡಚಣೆ ಮತ್ತು ಪಂಚಾಯತ್ ಗಳು ಕೈ ಗೊಂಡಿರುವ ಉತ್ತಮ ಆಡಳಿತದ ಬಗ್ಗೆ ಮಾಹಿತಿ ಪಡೆದು ಕೊಂಡರು.
MGNREGA ಯೋಜನೆ,15ನೇ ಹಣಕಾಸು ಅನುದಾನದಡಿ ಕಾಮಗಾರಿಯನ್ನು ಉತ್ತಮವಾಗಿ ಅನುಷ್ಠಾನಗೊಳಿಸಿದ್ದನ್ನು ತಿಳಿಸಿದರು.
JJM ಯೋಜನೆಯ ಕಾಮಗಾರಿಗಳ ಅನುಷ್ಠಾನದಲ್ಲಿ ಆಗಿರುವ ಸಮಸ್ಯೆ ಮತ್ತು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಆಡಳಿತ ಮಂಡಳಿಯ ಸದಸ್ಯರು ತಿಳಿಸಿದರು.
ಗ್ರಾಮ ಪಂಚಾಯತ್ ಯ ಉಪಾಧ್ಯಕ್ಷರು, ಹಾಜರಿದ್ದ ಎಲ್ಲಾ ಸದಸ್ಯರು ತಮ್ಮ ಸೇವಾ ಅವಧಿಯಲ್ಲಿನ ಅನುಭವವನ್ನು ಹಂಚಿಕೊಂಡರು.ಗ್ರಾಮೀಣ ಭಾಗದ ಸಾರ್ವಜನಿಕರು ತಮ್ಮ ನಿವೇಶನದ ವಿನ್ಯಾಸ ಅನುಮೋದನೆಗೆ ನಗರ ಯೋಜನಾ ಪ್ರಾಧಿಕಾರಕ್ಕೆ ಅಲೆದಾಟ ನಡೆಸುತ್ತಿರುವ ಮತ್ತು ಸದರಿ ಪ್ರಾಧಿಕಾರದಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಸಾರ್ವಜನಿಕರು ಅನುಭವಿಸುತ್ತಿರುವ ಕಷ್ಟದ ಬಗ್ಗೆ ತಿಳಿಸಿದರು. ಸದರಿ ವಿನ್ಯಾಸ ಅನುಮೋದನೆ ಅಧಿಕಾರವನ್ನು ಗ್ರಾಮ ಪಂಚಾಯತ್ ಗೆ ನೀಡಲು ಪ್ರಯತ್ನಿಸುವಂತೆ ವಿನಂತಿಸಿಕೊಂಡರು.
ಗ್ರಾಮ ಪಂಚಾಯತ್ ಎಲ್ಲಾ ಮನೆಗಳಿಂದ ಒಣಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಹೆಚ್ಚಿನ ಗಮನ ನೀಡಿ SBM ಯೋಜನೆಯನ್ನು ಯಶಸ್ವಿಗೊಳಿಸಲು ಪ್ರಯತ್ನಿಸುವಂತೆ ತಿಳಿಸಿದರು.
ಹಲವಾರು ಬೇಡಿಕೆ ಮತ್ತು ಮನವಿಗಳನ್ನು ಸ್ವೀಕರಿಸಿದರು. ತನ್ನ ಕಾರ್ಯ ಚೌಕಟ್ಟಿನಲ್ಲಿ ಸದರಿ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಗ್ರಾಮ ಪಂಚಾಯತ್ ಸಿಬ್ಬಂದಿಗಳ ಸಮಸ್ಯೆಯನ್ನು ಆಲಿಸಿ, ಸದರಿ ಸಮಸ್ಯೆಗಳನ್ನು ಈಡೇರಿಸಲು ಶ್ರಮವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಗ್ರಾಮದ ಸ್ಥಳೀಯ ನಾಯಕರು ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.