ಅಮನಬೆಟ್ಟು: ನಾಲ್ಕನೇ ವಷ೯ದ ಸಾರ್ವಜನಿಕ ಶನ್ನೈಶ್ಚರ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ
Wednesday, January 14, 2026
ಮೂಡುಬಿದಿರೆ: ಸಾವ೯ಜನಿಕ ಶ್ರೀ ಶನ್ನೈಶ್ಚರ ಪೂಜಾ ಸಮಿತಿ ಟ್ರಸ್ಟ್ ಅಮನಬೆಟ್ಟು ಮಾನಾ೯ಡು ಇದರ ವತಿಯಿಂದ ಫೆ.7ರಂದು ನಡೆಯುವ ನಾಲ್ಕನೇ ವರ್ಷದ ಸಾರ್ವಜನಿಕ ಶನ್ನೈಶ್ಚರ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಯು ಇತ್ತೀಚೆಗೆ ನಡೆಯಿತು.
ಪೂಜಾ ಸಮಿತಿಯ ಅಧ್ಯಕ್ಷ ರಮೇಶ್ ಪಿ. ಶೆಟ್ಟಿ, ಗೌರವಾಧ್ಯಕ್ಷ ದಯಾನಂದ ಪೈ, ಕಾರ್ಯದರ್ಶಿ ಸುರೇಶ್ ಪೂಜಾರಿ, ಸಂಚಾಲಕ ಭವಿಷ್ಯತ್ ಕೋಟ್ಯಾನ್, ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ, ಮಹಿಳಾ ಸಂಚಾಲಕಿ ಶಶಿಕಲಾ ಗಿರೀಶ್ ಅಂಬಡೆ ಬೈಲು, ಹಾಗೂ ಸಾರ್ವಜನಿಕ ಶನಿಶ್ಚರ ಪೂಜಾ ಸಮಿತಿಯ ಎಲ್ಲಾ ಸದಸ್ಯರುಗಳು ಹಾಗೂ ಗ್ರಾಮಸ್ಥರು ಈ ಸಂದಭ೯ದಲ್ಲಿದ್ದರು.