ಜ.16 ರಂದು ಐಸ್‌ಕ್ರೀಮ್ ಪರ್ಬ
Wednesday, January 14, 2026
ಮಂಗಳೂರು: ಪಾಂಡೇಶ್ವರದ ಫಿಝಾ ಬೈ ನೆಕ್ಸಸ್ ಮಾಲ್ ನಲ್ಲಿ ಜ.16ರಿಂದ ಜ.18ರವರೆಗೆ ಐಸ್ ಕ್ರೀ ಪರ್ಬ ಕಾರ್ಯಕ್ರಮ ಬೆಳಗ್ಗೆ 11ರಿಂದ ರಾತ್ರಿ 9ರವರೆಗೆ ನಡೆಯಲಿದೆ ಎಂದು ಕಿರಣ್ ಶೆಣೈ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನೆಕ್ಸಸ್ ಮಾಲ್ ಹಾಗೂ ಟ್ರೈ ತಿಂಡಿ ಆಶ್ರಯದಲ್ಲಿ ಮೂರನೇ ವರ್ಷದ ಐಸ್ ಕ್ರೀಂ ಪರ್ಬ ಈ ಬಾರಿ ಆಯೋಜಿಸಲಾಗಿದೆ. ಎಲ್ಲಾ ಐಸ್ ಕ್ರೀಂ ಸಂಸ್ಥೆಗಳನ್ನು ಒಂದೇ ಸೂರಿನಡಿ ಸೇರಿಸಿ ಪರ್ಬ ಸಂಘಟಿಸಲಾಗಿದೆ. ಈ ಬಾರಿ ಪ್ರತಿಷ್ಠಿತ 17 ಸಂಸ್ಥೆಗಳು ಭಾಗವಹಿಸಲಿವೆ. ಕಳೆದ 2 ವರ್ಷದಲ್ಲಿ ಸಹಸ್ರ ಸಂಖ್ಯೆಯಲ್ಲಿ ಜನರು ಪರ್ಬದಲ್ಲಿ ಭಾಗವಹಿಸಿದ್ದರು. ಈ ಬಾರಿ ಅದಕ್ಕೂ ಹೆಚ್ಚಿನ ಜನರ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಭಿಷೇಕ್ ಶೆಟ್ಟಿ ಉಪಸ್ಥಿತರಿದ್ದರು.