ಬಾಲಿಕ ಜೈನ್ ಗೆ ಅಬ್ಬಕ್ಕ ಪ್ರೇರಣಾ ಗೌರವ ಪುರಸ್ಕಾರ
ಬಾಲಿಕ ಜೈನ್ ರವರು ಸುಮಾರು 12 ವರ್ಷಗಳ ಕಾಲ ಸಮಾಜ ಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿ ಮತ್ತು ಮುಖ್ಯಸ್ಥಳಾಗಿ ಕಾರ್ಯನಿರ್ವಹಿಸಿದ್ದು ಹತ್ತು ಹಲವಾರು ಸಾರ್ವಜನಿಕ ವಲಯದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದಲ್ಲದೆ ನಿರೂಪಕಿಯಾಗಿ, ತೀರ್ಪುಗಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗಹಿಸಿರುತ್ತಾರೆ.
ಪ್ರಸ್ತುತ ತುಳು ರಂಗಭೂಮಿಯಲ್ಲಿ ಸುಮಾರು 25 ವರ್ಷಗಳ ಇತಿಹಾಸ ವಿರುವ ಬಹುಪ್ರಶಂಸನೀಯ ಹೆಸರಾಂತ ನಾಟಕ ತಂಡ"ಕುರಾಲ್ ಕಲಾವಿದೆರ್ ಬೆದ್ರ" ತಂಡದ ಸಾರಥ್ಯವನ್ನು ವಹಿಸಿಕೊಂಡಿದ್ದು ಸಮಗ್ರ ನಿರ್ವಾಹಕಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತುಳುರಂಗಭೂಮಿಯಲ್ಲಿಯೇ ಪ್ರಪ್ರಥಮ ಬಾರಿಗೆ ಕರಾವಳಿ ಪ್ರದೇಶದ ಪ್ರಮುಖ ಸಾಂಪ್ರದಾಯಿಕ ಕಲೆಯಾದ ಕುಣಿತ ಭಜನೆಯನ್ನು ಇವರ ನಾಟಕದಲ್ಲಿ ಅಳವಡಿಸಿಕೊಂಡು ಎಲ್ಲಿಯೂ ಅದಕ್ಕೆ ಧಕ್ಕೆ ಬಾರದ ಹಾಗೆ ಪ್ರದರ್ಶನ ನೀಡಿ ತುಳು ಭಾಷೆ ಮತ್ತು ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಸಾಮಾಜಿಕ ಸಾಂಸ್ಕೃತಿಕ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿ, ಜನ ಮೆಚ್ಚುಗೆಯನ್ನು ಗಳಿಸಿದ ಹೆಗ್ಗಳಿಕೆ ಇವರದ್ದಾಗಿದ್ದೆ.
ತುಳು ರಂಗಭೂಮಿಗೆ ಸಲ್ಲಿಸುತ್ತಿರುವ ಕಲಾ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳ ವತಿಯಿಂದ ಇವರನ್ನು ಸನ್ಮಾನಿಸಲಾಗಿದೆ.
ನಿರೂಪಣೆ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ರಂಗಭೂಮಿ ಕ್ಷೇತ್ರದಲ್ಲಿನ ಇವರ ಅವಿರತ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ.