ನಮ್ಮ ಒಳಗೆ ಇರುವ ಸ್ಪಂಧನೆಯ ತುಡಿತ ಮತ್ತು ಒಳ್ಳೆಯ ಅಭಿರುಚಿ ಜನಮೆಚ್ಚುಗೆ ಪಡೆಯುತ್ತದೆ: ರೇಮಂಡ್ ಡಿಕೂನಾ ತಾಕೊಡೆ
Wednesday, January 28, 2026
ಮಂಗಳೂರು: ಜನರ ಬಳಿಗೆ ಹೋಗಿ ಅವರ ಅಗತ್ಯಕ್ಕೆ ಬೇಕಾದ ಉಳಿತಾಯ ಮಾಡಲು ಹೇಳುವ ಪ್ರತಿಯೊಬ್ಬರು ತಮ್ಮ ಒಳಗೆ ಸ್ಪಂಧನೆಯ ತುಡಿತ ಮತ್ತು ಒಳ್ಳೆಯ ಅಭಿರುಚಿಯ ನಡತೆಯನ್ನು ಹೊಂದಿರಬೇಕು ಎಂದು ಹಿರಿಯ ಪತ್ರಕರ್ತ, ಜೇಸಿಯ ಹಿರಿಯ ತರಬೇತುದಾರ ರೇಮಂಡ್ ಡಿಕೂನಾ ತಾಕೊಡೆ ಹೇಳಿದರು.
ಅವರು ಮಂಗಳೂರು ಪದುವಾ ಕಾಲೇಜಿನಲ್ಲಿ ಡಾ. ಮರಿಯಾ ಪ್ರಮೀಳಾ ಅವರ ಫೈನಾನ್ಸಿಯಲ್ ಅವೇರ್ನೆಸ್ ತರಭೇತಿಯನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಉಡುಗೆ ತೊಡುಗೆ, ಮಾತುಗಳ ನಯ ಜನರ ಮೇಲೆ ಪ್ರಭಾವ ಬೀರುತ್ತವೆ. ನಾವು ಸಚ್ಚಾರಿತ್ರ್ಯದಿಂದ ಇರುವುದು ಸಹ ಅಗತ್ಯ ಎಂದರು.
ತರಭೇತಿದಾರರಾದ ಡಾ. ಮರಿಯಾ ಪ್ರಮೀಳಾ ಮಾತನಾಡಿ, ನಮ್ಮ ವಯಸ್ಸಿನ ಮೇಲೆ ನಿಗಾ ಇಡುವುದು ಅಗತ್ಯ ಅಲ್ಲ. ನಮ್ಮ ದಾರಿಯಲ್ಲಿ ಸಾಧನೆಯ ಮೈಲುಗಳು ಎಷ್ಟಿರಬೇಕು ಎಂದು ಮುಖ್ಯ ಇದಕ್ಕಾಗಿ ನಿಯಮಿತವಾಗಿ ದುಡಿದು ಸಾಧನೆ ಮಾಡಬೇಕು ಎಂದರು.
ಹಿರಿಯ ಶಿಕ್ಷಕ ಸ್ಟೇನಿ ತಾವ್ರೊ ಸ್ವಾಗತಿಸಿ, ಜೋನ್ ತಾವ್ರೊ ವಂದಿಸಿದರು.