ಬೋರುಗುಡ್ಡೆ ಶ್ರೀ ಕ್ಷೇತ್ರ ಸತ್ಯಪುರ ಶ್ರೀ ಸತ್ಯನಾರಾಯಣ ನೂತನ ಗರ್ಭಗೃಹಕ್ಕೆ ಶಿಲಾನ್ಯಾಸ
ಅವರು ಬುಧವಾರ ಬೋರುಗುಡ್ಡೆ ಶ್ರೀ ಕ್ಷೇತ್ರ ಸತ್ಯಪುರ ಶ್ರೀ ಸತ್ಯನಾರಾಯಣ ದೇವಸ್ಥಾನದ ನೂತನ ಗರ್ಭಗೃಹದ ಶಿಲಾನ್ಯಾಸ ಮತ್ತು ನಿಧಿಕುಂಭ ಸ್ಥಾಪನಾ ಕಾರ್ಯಕ್ರಮದ ಧಾಮಿ೯ಕ ಸಭೆಯಲ್ಲಿ ಭಾಗವಹಿಸಿ ಆಶೀವ೯ಚನ ನೀಡಿದರು.
ಸಭೆಯಲ್ಲಿ ಪಣಪಿಲ ಅರಮನೆಯ ಬಿ. ವಿಮಲ್ ಕುಮಾರ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರುಕ್ಕಯ್ಯ ಪೂಜಾರಿ ಅವರನ್ನು ಗೌರವಿಸಲಾಯಿತು.
ಮಾಗಣೆ ತಂತ್ರಿ ಕೆ. ನರಸಿಂಹ ತಂತ್ರಿ, ಅಸ್ರಣ್ಣರಾದ ನಾಗರಾಜ್ ಭಟ್, ವಾಸ್ತುಶಿಲ್ಪಿ ಪ್ರಮಲ್ ಕುಮಾರ್ ಕಾರ್ಕಳ, ಮುಂಬೈನ ಉದ್ಯಮಿ ಕೆ. ಕೃಷ್ಣರಾಜ ತಂತ್ರಿ, ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಡಳಿತ ಮೋಕೇಸರ ದೇವೇಂದ್ರ ಹೆಗ್ಡೆ, , ಶ್ರೀ ಕ್ಷೇ.ಧ.ಗ್ರಾ.ಯೋಜನೆ ನಿವೃತ್ತ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಪದ್ಮಕುಮಾರ್ ಕೊಂಬೆಟ್ಟುಗುತ್ತು, ಮಾಂಟ್ರಾಡಿ, ಉದ್ಯಮಿ ಶ್ರೀಪತಿ ಭಟ್, ಹೇಮಾ ಕೆ. ಪೂಜಾರಿ ಅಳಿಯೂರು, ಭಾನುಮತಿ ಶೀನಪ್ಪ, ದರೆಗುಡ್ಡೆ ಗ್ರಾಪಂ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ನೆಲ್ಲಿಕಾರು ಗ್ರಾಪಂ ಅಧ್ಯಕ್ಷ ಉದಯ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರೇಮ್ ಕುಮಾರ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಹನ್ನೇರ್, ಅಡಳಿತ ಸಮಿತಿ ಅಧ್ಯಕ್ಷ ಜಯಂತ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೆ.ಅಶ್ವಥ್ ಪಣಪಿಲ ಉಪಸ್ಥಿತರಿದ್ದರು.
ಇಂದು ಜೇತನ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಶ್ರೀ ಸತ್ಯನಾರಾಯಣ ತಂತ್ರಿಯವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.
