ಕಂಬಳದಿಂದ ವ್ಯಾಪಾರ ವ್ಯವಹಾರ ಜಾಸ್ತಿ: ಮೂಡುಬಿದಿರೆ ಕಂಬಳದಲ್ಲಿ ಜಿಲ್ಲಾಧಿಕಾರಿ ದಶ೯ನ್ ಹೆಚ್.ವಿ. ಅಭಿಪ್ರಾಯ
Saturday, January 31, 2026
ಮೂಡುಬಿದಿರೆ: ಕಂಬಳಗಳು ಹಬ್ಬದ ವಾತಾವರಣ ಮೂಡಿಸುತ್ತವೆ. ಜಿಲ್ಲೆಗಳು ನಡೆಯುವ ಕಂಬಳಗಳಿಂದ ವ್ಯಾಪಾರ ವ್ಯವಹಾರಗಳು ಜಾಸ್ತಿಯಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅಭಿಪ್ರಾಯಪಟ್ಟರು.
ಅವರು ಶಾಸಕ ಉಮಾನಾಥ ಎ. ಕೋಟ್ಯಾನ್ ಅವರ ಸಾರಥ್ಯದಲ್ಲಿ ಮೂಡುಬಿದಿರೆ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುವ 23ನೇ ವರ್ಷದ ಹೊನಲು ಬೆಳಕಿನ "ಕೋಟಿ-ಚೆನ್ನಯ" ಕಂಬಳೋತ್ಸವದ ಸಭಾ ಕಾಯ೯ಕ್ರಮವನ್ನು ಉದ್ಘಾಟಿಸಿ, ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾಪ೯ಣೆಗೈದು ಮಾತನಾಡಿದರು.
ಖ್ಯಾತ ವಾಗ್ಮಿ ಶ್ರೀಕಾಂತ್ ಶೆಟ್ಟಿ ರಾಣಿ ಅಬ್ಬಕ್ಕ ದೇವಿಯ ಕುರಿತು ಉಪನ್ಯಾಸ ನೀಡಿ ಪೋಚು೯ಗೀಸರ ದಬ್ಬಾಳಿಕೆ, ಧಮನ ನೀತಿಯ ವಿರುದ್ಧ ತನ್ನ ಸೀಮಿತವಾದ ಸೈನ್ಯ ಬಲದೊಂದಿಗೆ ಹೋರಾಟ ಮಾಡಿದಾಕೆ ಅಬ್ಬಕ್ಕ. ಸಮುದ್ರದ ಮೂಲಕ ಬರುತ್ತಿದ್ದ ಪೋಚು೯ಗೀಸರ ಹಡಗಿನ ಮೇಲೆ ಅಗ್ನಿಬಾಣವನ್ನು ಪ್ರಯೋಗ ಮಾಡಿದ್ದಲ್ಲದೆ ಬಂಟರು, ಮೊಗವೀರರು, ಬಿಲ್ಲವರ ಸಹಕಾರದಿಂದ ನೂರಾರು ಸಂಖ್ಯೆಯಲ್ಲಿದ್ದ ಪೋಚು೯ಗೀಸರ ಹಡಗುಗಳನ್ನು ಸುಟ್ಟು ಭಸ್ಮ ಮಾಡುವ ಮೂಲಕ ನಡು ನೀರಿನಲ್ಲಿ ಸಮಾಧಿ ಮಾಡಿದಂತಹ ಕೀತಿ೯ ಉಳ್ಳಾಲ ಅಬ್ಬಕ್ಕನಿಗೆ ಸಲ್ಲುತ್ತದೆ ಎಂದ ಅವರು ಹೆಣ್ಣೊಬ್ಬಳು ಯಾವುದೇ ಕ್ಷೇತ್ರದಲ್ಲೂ ಸಾಧನೆ ಮತ್ತು ಸಾಹಸ ಮಾಡಲು ಹೊರಟಾಗ ಆಕೆಗೆ ಸಹಕಾರ ನೀಡಿದರೆ ಆಕೆ ಗಂಡಿಗೆ ಸರಿಸಮಾನಳಾಗಿ ನಿಲ್ಲಬಲ್ಲಳು ಎಂಬುದಕ್ಕೆ ಅಬ್ಬಕ್ಕ ಉದಾಹರಣೆ ಎಂದರು.
ಗೌರವ ಸನ್ಮಾನ: ಮೂಡುಬಿದಿರೆಯ ಮಣ್ಣಿನ ಮಗಳು ರಾಣಿ ಅಬ್ಬಕ್ಕ ಅಭಿಯಾನದ ಪ್ರಮುಖರಾದ ಜವನೆರ್ ಬೆದ್ರ ಫೌಂಡೇಶನ್ ಸಂಸ್ಥಾಪಕ ಅಮರ್ ಕೋಟೆ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದಭ೯ದಲ್ಲಿ ಜಿಲ್ಲಾಧಿಕಾರಿ ದಶ೯ನ್ ಹೆಚ್.ವಿ. ಅವರನ್ನು ಕಂಬಳ ಸಮಿತಿಯ ವತಿಯಿಂದ ಗೌರವಿಸಲಾಯಿತು.
ಮೂಡುಬಿದಿರೆ ತಹಶೀಲ್ದಾರ್ ಶ್ರೀಧರ ಎಸ್. ಮುಂದಲಮನಿ, ಆಲಂಗಾರು ಚಚ್೯ನ ಧಮ೯ಗುರು ಫಾ. ಮೆಲ್ವಿನ್ ನೊರೊನ್ಹಾ, ಉದ್ಯಮಿ ಕುಂಟಾಡಿ ಸುಧೀರ್ ಹೆಗ್ಡೆ, ಕಂಬಳ ಸಮಿತಿಯ ಪ್ರಧಾನ ಕಾಯ೯ದಶಿ೯ ಗುಣಪಾಲ ಕಡಂಬ, ಕಾಯ೯ದಶಿ೯ ರಂಜಿತ್ ಪೂಜಾರಿ, ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್, ಪ್ರ.ಕಾಯ೯ದಶಿ೯ ಹರಿಪ್ರಸಾದ್, ಯುವ ಮೋಚಾ೯ದ ಅಧ್ಯಕ್ಷ ಕುಮಾರ್ ಪ್ರಸಾದ್, ರಾಜ್ಯ ಬಿಜೆಪಿ ಕಾಯ೯ಕಾರಿಣಿ ಸದಸ್ಯ ಕೆ. ಆರ್. ಪಂಡಿತ್, ವಕೀಲ ಸುರೇಶ್ ಕೆ. ಪೂಜಾರಿ ಪುರಸಭಾ ನಿಕಟಪೂವ೯ ಅಧ್ಯಕ್ಷೆ ಜಯಶ್ರೀ ಕೇಶವ್, ನಿಕಟಪೂವ೯ ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ನವೀನ್ ಶೆಟ್ಟಿ, ಸೌಮ್ಯ ಸಂದೀಪ್ ಶೆಟ್ಟಿ, ಸುಜಾತ ಶಶಿಕಿರಣ್, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ಶಿವ ಪ್ರಸಾದ್ ಹೆಗ್ಡೆ, ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಬಿ. ಸೀತಾರಾಮ ಆಚಾಯ೯, ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್, ವೆಂಕಟರಮಣ ಮತ್ತು ಹನುಮಂತ ದೇವಸ್ಥಾನಗಳ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ, ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಆಚಾಯ೯, ಕೋಣಗಳ ಯಜಮಾನ ಇರುವೈಲು ಪಾಣಿಲ ಸತೀಶ್ಚಂದ್ರ,ಸಂಶೋಧನಾ ಸಾಹಿತಿ ರಿಶಲ್ ಬ್ರಿಟ್ನಿ ಫೆನಾ೯ಂಡಿಸ್, ಪ್ರಮುಖರಾದ ದಿನೇಶ್ ಪೂಜಾರಿ, ಲಕ್ಷ್ಮಣ್ ಪೂಜಾರಿ, ಯಶೋಧರ ದೇವಾಡಿಗ ಮತ್ತಿತರರು ಈ ಸಂದಭ೯ದಲ್ಲಿದ್ದರು.
ಶಾಸಕ ಉಮಾನಾಥ ಎ. ಕೋಟ್ಯಾನ್ ಸ್ವಾಗತಿಸಿದರು. ಯೋಗೀಶ್ ಶೆಟ್ಟಿ ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.





