ಪರಂಪರಾಗತ ಕೃಷಿ ವಿಕಾಸ ಯೋಜನೆ ಮಾಹಿತಿ ಕಾರ್ಯಗಾರ
Wednesday, January 14, 2026
ಸುಬ್ರಹ್ಮಣ್ಯ: ತೋಟಗಾರಿಕೆ ಇಲಾಖೆ ದಕ್ಷಿಣ ಕನ್ನಡ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಸುಳ್ಯ ಹಾಗೂ ಪರಿವಾರ ಪಂಜ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಇವರ ಸಹಯೋಗ ದಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಗುಚ್ಛದ ರೈತರಿಗೆ ಸಾವಯವ ಕೃಷಿ, ಪಿಜಿಎಸ್ ದೃಡೀಕರಣ ಹಾಗೂ ಬೆಳೆ ರೋಗ ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಕ್ರಮ ಹಾಗೂ ಮಾಹಿತಿ ಕಾರ್ಯಾಗಾರ ಪಂಜ ಲಯನ್ಸ್ ಸಭಾಭವನದಲ್ಲಿ ಜ.13 ರಂದು ನಡೆಯಿತು.
ಪರಿವಾರ ಪಂಜ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಇದರ ಅಧ್ಯಕ್ಷರಾದ ತೀರ್ಥನಂದ ಕೊಡೆಂಕಿರಿ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಯುವ ಸಾವಯವ ಕೃಷಿಕರಾದ ಪ್ರಜ್ವಲ್ ಬಿಳಿಮಳೆ ಕಾರ್ಯಾಗಾರ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಿಪಿಸಿಆರ್‌ಐ ವಿಜ್ಞಾನಿ ನಾಗರಾಜ ಹಾಗೂ ಬಿಓಸಿಬಿ ಪ್ರಧಾನ ವ್ಯವಸ್ಥಾಪಕ ಆಕಾಶ್ ಅವರು ರೈತರಿಗೆ ಸೂಕ್ತ ಮಾಹಿತಿಯನ್ನು ನೀಡಿದರು.
ಸಹಾಯಕ ತೋಟಗಾರಿಕೆ ನಿರ್ದೇಶಕಿ ಸುಹಾನ ಪಿ.ಕೆ. ಅತಿಥಿಯಾರಿದ್ದಾರು. ಪರಿವಾರ ಪಂಜ ಎಫ್‌ಪಿಸಿಎಲ್ ಇದರ ನಿರ್ದೇಶಕರು ಗಳಾದ ಕಾರ್ಯಪ್ಪ ಗೌಡ ಚಿದ್ಗಲ್ ಸ್ವಾಗತಿಸಿದರು. ರಮಾನಂದ ಎಣ್ಣೆಮಜಲು ವಂದಿಸಿ, ಐ.ಸಿ.ಸಿ.ಓ.ಏ ಬೆಂಗಳೂರು ದ.ಕ. ಜಿಲ್ಲಾ ಸಂಯೋಜಕರಾದ ಡಿಕೇಶ್ ಗೌಡ ಜಿ. ಕಾರ್ಯಕ್ರಮ ನಿರೂಪಿಸಿದರು.
ಎಲ್‌ಆರ್‌ಪಿ ಯೋಗೀಶ್ ಹೊಸೊಳಿಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್, ನಿರ್ದೇಶಕರಾದ ಆನಂದ ಜಳಕದಹೊಳೆ ಬೆಳ್ಳಿಯಪ್ಪ ನಾದೂರು ಸಿಬ್ಬಂದಿ ಕಾರ್ತಿಕ್ ಸಹಕರಿಸಿದರು, ಪಿಕೆವಿವೈ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಲ್ಲಿ ಸಹಕರಿಸಿದರು.
